ಸೋಮವಾರ, ನವೆಂಬರ್ 18, 2019
25 °C

ಹರಿಯಾಣದಲ್ಲಿ ಶೇ.62ರಷ್ಟು ಮತದಾನ

Published:
Updated:

ಹರಿಯಾಣ: ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿರುವ ವಿಧಾನಸಭಾ ಚುನಾವಣಾ ಮತದಾನದಲ್ಲಿ ಸಂಜೆ 6ಗಂಟೆಯ ವೇಳೆಗೆ ಶೇ. 62ರಷ್ಟು ಮಂದಿ ಮತದಾರರು ಮತಚಲಾಯಿಸಿದ್ದಾರೆ. 

ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ನೇತೃತ್ವದಲ್ಲಿ ಬಿಜೆಪಿ ಈ ಬಾರಿಯ ಚುನಾವಣೆಯನ್ನು ಎದುರಿಸಿದ್ದರು. ಸಂಜೆಯೊಳಗೆ ನಡೆದ ಮತದಾನದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮಧ್ಯಾಹ್ನ 3ಗಂಟೆಯ ವೇಳೆ ಶೇ.50ರಷ್ಟಿದ್ದ ಮತದಾನವು ಸಂಜೆಯಾಗುತ್ತಲೇ ಬಿರುಸಿನಿಂದ ಕೂಡಿತ್ತು ಎನ್ನಲಾಗಿದೆ. ಇಂದಿನ ಮತದಾನಕ್ಕೆ ಸ್ಥಳೀಯ ಪೊಲೀಸರು ಹಾಗೂ ಅರೆಸೇನಾ ತುಕಡಿ ಸೇರಿದಂತೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಪ್ರತಿಕ್ರಿಯಿಸಿ (+)