ಚಿಟ್ಟೆಬೈಲಿನಲ್ಲಿ ಸಂಸ್ಕೃತ ಪಾಠ

ಬುಧವಾರ, ಜೂಲೈ 17, 2019
30 °C

ಚಿಟ್ಟೆಬೈಲಿನಲ್ಲಿ ಸಂಸ್ಕೃತ ಪಾಠ

Published:
Updated:

ನವದೆಹಲಿ: ಶಿವಮೊಗ್ಗದ ಚಿಟ್ಟೆಬೈಲು ಸೇರಿದಂತೆ ದೇಶದ ಐದು ಗ್ರಾಮಗಳು ಇನ್ನು ಸಂಸ್ಕೃತಮಯವಾಗಲಿವೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನವು ಐದು ಗ್ರಾಮಗಳನ್ನು ದತ್ತು ಪಡೆದಿದ್ದು, ಅಲ್ಲಿನ ಜನರು ಸಂಪೂರ್ಣವಾಗಿ ಸಂಸ್ಕೃತದಲ್ಲಿ ವ್ಯವಹಾರಿಸುವ ರೀತಿ ತರಬೇತಿ ನೀಡಲಿದೆ.

ಮೂರುವರೆ ಸಾವಿರ ವರ್ಷಗಳಷ್ಟು ಇತಿಹಾಸ ಹೊಂದಿರುವ ಸಂಸ್ಕೃತ ಭಾಷೆಯನ್ನು ಪ್ರಚಾರ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮೂರು ಸಂಸ್ಥೆಗಳು ಕಾರ್ಯನಿರತವಾಗಿವೆ. ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ, ದೆಹಲಿಯ ಲಾಲ್‌ ಬಹದ್ದೂರ್ ಶಾಸ್ತ್ರಿ ಸಂಸ್ಕೃತ ವಿದ್ಯಾಪೀಠ ಮತ್ತು ತಿರುಪತಿಯಲ್ಲಿರುವ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. 

ಭಾಷೆಯನ್ನು ಉಳಿಸಿ ಬೆಳೆಸುವುದು ಮತ್ತು ಸಂಸ್ಕೃತವನ್ನು ಮಾತನಾಡುವ ಭಾಷೆಯನ್ನಾಗಿ ಮಾಡುವ ಉದ್ದೇಶದಿಂದ ಎರಡು ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸಚಿವಾಲಯ ಮೂರೂ ಸಂಸ್ಥೆಗಳಿಗೆ ನಿರ್ದೇಶನ ನೀಡಿತ್ತು. ಸಚಿವ ರಾಮೇಶ್ ಪೋಖ್ರಿಯಾಲ್ ಅವರು ಸಂಸ್ಥೆಗಳ ಜೊತೆ ಕಳೆದ ತಿಂಗಳು ಸಭೆ ನಡೆಸಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !