ಗುರುವಾರ , ಜೂನ್ 24, 2021
28 °C

ಮುಷ್ಕರ ಕೈಬಿಟ್ಟ ಲಾರಿ ಮಾಲೀಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ತೈಲ ಮಾರಾಟ ಕಂಪೆನಿಗಳ ಪ್ರತಿನಿಧಿಗಳು, ಮುಷ್ಕರ ನಿರತ ಎಲ್‌ಪಿಜಿ ಟ್ಯಾಂಕರ್ ಹಾಗೂ ಲಾರಿ ಮಾಲೀಕರ ಜತೆ ಸರ್ಕಾರ ನಡೆಸಿದ ಸಂಧಾನ ಮಾತುಕತೆ ಫಲಪ್ರದವಾಗಿದ್ದು, ಲಾರಿ ಮಾಲೀಕರು ಕಳೆದ ಹಲವು ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಗುರುವಾರ ಕೈಬಿಟ್ಟಿದ್ದಾರೆ.ತೈಲ ಕಂಪೆನಿಯ ಪ್ರತಿನಿಧಿಗಳು ಮತ್ತು ಲಾರಿ ಮಾಲೀಕರ ಜತೆ ಸರ್ಕಾರ ಸತತ 10 ಗಂಟೆಗಳ ಕಾಲ ನಡೆಸಿದ ಮಾತುಕತೆ ನಂತರ ಈ ನಿರ್ಧಾರ ಹೊರಬಿದ್ದಿದೆ. ಇದರಿಂದ, ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಬಗ್ಗೆ ಆತಂಕಕ್ಕೆ ಒಳಗಾಗಿದ್ದ ದಕ್ಷಿಣದ ರಾಜ್ಯಗಳ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಬಾಡಿಗೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸುಮಾರು 500ಕ್ಕೂ ಹೆಚ್ಚು ಎಲ್‌ಪಿಜಿ ಟ್ಯಾಂಕರ್, ಲಾರಿ ಮಾಲೀಕರು ಫೆ. 29ರಿಂದ ಏಕಾಏಕಿ ಮುಷ್ಕರ ಆರಂಭಿಸಿದ ಕಾರಣ, ಸಿಲಿಂಡರ್ ಪೂರೈಕೆ ಏರುಪೇರಾಗಿತ್ತು.

 

ಟ್ಯಾಂಕರ್‌ಗಳ ಸಂಚಾರ ಆರಂಭ
ಸುರತ್ಕಲ್: ದಕ್ಷಿಣ ಭಾರತ ಎಲ್‌ಪಿಜಿ ಟ್ಯಾಂಕರ್ ಮಾಲೀಕರು ಮುಷ್ಕರವನ್ನು ಹಿಂಪಡೆದ ಹಿನ್ನೆಲೆಯಲ್ಲಿ ಇಲ್ಲಿ ಠಿಕಾಣಿ ಹೂಡಿದ್ದ ಟ್ಯಾಂಕರ್‌ಗಳು ಗುರುವಾರ ಬೆಳಿಗ್ಗೆ ಸಂಚಾರ ಆರಂಭಿಸಿವೆ.ಬಾಳದಲ್ಲಿರುವ ಎಂಆರ್‌ಪಿಎಲ್-ಒಎನ್‌ಜಿಸಿ, ಎಚ್‌ಪಿಸಿಎಲ್ ಘಟಕಗಳಿಂದ ರಾಜ್ಯ, ದೇಶದ ವಿವಿಧೆಡೆಗೆ ಅನಿಲ ತುಂಬಿಸಿಕೊಂಡು ಹೊರಟವು.

30 ದಿನಗಳ ಒಳಗೆ ತೈಲ ಕಂಪೆನಿ ಮತ್ತು ಲಾರಿ ಮಾಲೀಕರು ಪರಸ್ಪರ ನಿರ್ಣಯಕ್ಕೆ ಬರುವಂತೆ ಸೂಚಿಸಲಾಗಿದೆ.ಲಾರಿ ಮತ್ತು ಟ್ಯಾಂಕರ್‌ಗಳು ಗುರುವಾರದಿಂದಲೇ ರಸ್ತೆಗೆ ಇಳಿದಿವೆ. ತೈಲ ಕಂಪೆನಿಗಳ ಜತೆ ಇನ್ನೊಂದು ಸುತ್ತಿನ ಮಾತುಕತೆಯ ನಂತರ ದರ ನಿಗದಿಪಡಿಸಲಾಗುವುದು ಎಂದು ಲಾರಿ ಮತ್ತು ಟ್ಯಾಂಕರ್ ಮಾಲೀಕರ ಸಂಘ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.