ದೇಶದಾದ್ಯಂತ 900 ಕೈದಿಗಳ ಬಿಡುಗಡೆಗೆ ಗೃಹ ಸಚಿವಾಲಯ ನಿರ್ಧಾರ

7
ಮಹಾತ್ಮ ಗಾಂಧಿಯ 150ನೇ ಜನ್ಮದಿನಾಚರಣೆ ಪ್ರಯುಕ್ತ

ದೇಶದಾದ್ಯಂತ 900 ಕೈದಿಗಳ ಬಿಡುಗಡೆಗೆ ಗೃಹ ಸಚಿವಾಲಯ ನಿರ್ಧಾರ

Published:
Updated:

ನವದೆಹಲಿ: ದೇಶದಾದ್ಯಂತ 900ಕ್ಕೂ ಹೆಚ್ಚು ಕೈದಿಗಳನ್ನು ಬಿಡುಗಡೆ ಮಾಡಲು ಗೃಹ ಸಚಿವಾಲಯ ನಿರ್ಧರಿಸಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನದ ಪ್ರಯುಕ್ತ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.

ಈಗಾಗಲೇ ಶಿಕ್ಷೆಯ ಅರ್ಧ ಪ್ರಮಾಣವನ್ನು ಪೂರೈಸಿರುವ 55 ವರ್ಷ ಮೇಲ್ಪಟ್ಟ ಮಹಿಳಾ ಅಪರಾಧಿಗಳು ಹಾಗೂ 60 ವರ್ಷ ಮೇಲ್ಪಟ್ಟ ಪುರುಷ ಅಪರಾಧಿಗಳು ಹಾಗೂ ಬಿಜೆಪಿ ಸರ್ಕಾರ ಘೋಷಿಸಿದ ಅಮ್ನೆಸ್ಟಿ ಯೋಜನೆಗೆ ಒಳಪಟ್ಟ ಕೆಲವು ಅರ್ಹತಾ ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ.

900 ಕೈದಿಗಳನ್ನು ಒಟ್ಟು ಮೂರು ಹಂತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದ್ದು, ಇದೇ ವಾರದ ಅವಧಿಯಲ್ಲಿ ಕೆಲವರನ್ನು, ಏಪ್ರಿಲ್ 6, 2019 ಮತ್ತು ಅಕ್ಟೋಬರ್ 2, 2019 ರಂದು ಉಳಿದವರನ್ನು ಹೊರಗೆ ಕಳುಹಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. 

ಬಿಡುಗಡೆ ವೇಳೆ ಕೈದಿಗಳಿಗೆ ಮಹಾತ್ಮ ಗಾಂಧಿಗೆ ಸಂಬಂಧಿಸಿದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಗುವುದು.

ವಿಶೇಷ ಕ್ಷಮಾ ಯೋಜನೆ:

ನಿಗದಿತ ಶಿಕ್ಷೆಯ ಪ್ರಮಾಣದ ಅರ್ಧ ಮುಗಿಸಿರುವ 50 ವರ್ಷ ಮೇಲ್ಪಟ್ಟ ಮಹಿಳಾ ಅಪರಾಧಿಗಳು ಹಾಗೂ ಲಿಂಗಪರಿವರ್ತನಧಾರಿಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !