ಗ್ರಾಮೀಣ ಭಾಗದಲ್ಲಿ ಶೇ.93ರಷ್ಟು ಮನೆಗಳಲ್ಲಿ ಶೌಚಾಲಯ ಲಭ್ಯ

ಸೋಮವಾರ, ಮಾರ್ಚ್ 25, 2019
21 °C
ಸರ್ಕಾರದ ಸಮೀಕ್ಷೆಯಿಂದ ಬಹಿರಂಗ

ಗ್ರಾಮೀಣ ಭಾಗದಲ್ಲಿ ಶೇ.93ರಷ್ಟು ಮನೆಗಳಲ್ಲಿ ಶೌಚಾಲಯ ಲಭ್ಯ

Published:
Updated:
Prajavani

ನವದೆಹಲಿ: ಗ್ರಾಮೀಣ ಭಾಗದ ಶೇ  93ರಷ್ಟು ಮನೆಗಳಲ್ಲಿ ಶೌಚಾಲಯ ಲಭ್ಯವಿದ್ದು, ಈ ಪೈಕಿ ಶೇ 96.5 ಮಂದಿ ಅವುಗಳನ್ನು ಬಳಸುತ್ತಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಕುಡಿಯುವ ನೀರು ಹಾಗೂ ಸ್ವಚ್ಛ ಸಚಿವಾಲಯದ ಮೇಲುಸ್ತುವಾರಿಯಲ್ಲಿ ನಡೆದ ’ರಾಷ್ಟ್ರೀಯ ಗ್ರಾಮೀಣ ಸ್ವಚ್ಛ ವಾರ್ಷಿಕ‘ ಸಮೀಕ್ಷೆಯಲ್ಲಿ ಈ ಅಂಶ ಕಂಡುಬಂದಿದೆ.

ದೇಶದ ವಿವಿಧ ರಾಜ್ಯಗಳಲ್ಲಿ ಶೇ.90.7ರಷ್ಟು ಗ್ರಾಮಗಳನ್ನು ’ಬಯಲು ಬಹಿರ್ದೆಸೆಮುಕ್ತ‘ ಎಂದು ಇದೇ ವೇಳೆ ಖಾತರಿಪಡಿಸಲಾಗಿದೆ.  ’2018ರ ನವೆಂಬರ್‌ನಿಂದ 2019ರ ಫೆಬ್ರುವರಿ ತನಕ ದೇಶದ 6,136 ಗ್ರಾಮಗಳ 92,040 ಮನೆಗಳಿಗೆ ತೆರಳಿ ಈ ಸಮೀಕ್ಷೆ ನಡೆಸಲಾಗಿದೆ‘ ಎಂದು ಸಚಿವಾಲಯವು ತಿಳಿಸಿದೆ.

ಸ್ವಚ್ಛಭಾರತ ಯಶಸ್ಚಿ: 2014ರಲ್ಲಿ ಸ್ವಚ್ಛ ಭಾರತ ಯೋಜನೆ ಜಾರಿಯಾದ ಬಳಿಕ ದೇಶದ ಕೋಟ್ಯಂತರ ಮಂದಿ ತನ್ನ ನಡೆಯಲ್ಲಿ ಬದಲಾವಣೆ ಮಾಡಿ, ಶೌಚಾಲಯ ಬಳಸುವುದನ್ನು ರೂಢಿಸಿಕೊಂಡರು. ಯೋಜನೆ ಜಾರಿಗೂ ಮುನ್ನ ದೇಶದಲ್ಲಿ 50.5 ಕೋಟಿ ಮಂದಿ ಬಯಲುಬಹಿರ್ದೆಸೆಯಲ್ಲಿ ತೊಡಗಿದ್ದರು, ಈಗ ಈ ಪ್ರಮಾಣವು 5 ಕೋಟಿಗೆ ಇಳಿದಿದೆ ಎಂದು ಸಮೀಕ್ಷೆ ತಿಳಿಸಿದೆ.

‘ಯೋಜನೆ ಅಡಿಯಲ್ಲಿ 9 ಕೋಟಿ ಶೌಚಾಲಯ ನಿರ್ಮಿಸಲಾಗಿದೆ. ದೇಶದ 615 ಜಿಲ್ಲೆಗಳ 5.5 ಲಕ್ಷ ಗ್ರಾಮಗಳನ್ನು ‘ಬಯಲುಬಹಿರ್ದೆಶೆ ಮುಕ್ತ’ ಗ್ರಾಮಗಳಾಗಿ ಘೋಷಿಸಲಾಗಿದೆ’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !