ಬುಧವಾರ, ಸೆಪ್ಟೆಂಬರ್ 18, 2019
22 °C

5 ವರ್ಷಗಳಲ್ಲಿ  942 ಬಾಂಬ್ ದಾಳಿ ನಡೆದಿದೆ, ಪ್ರಧಾನಿ ಕಿವಿಗೊಟ್ಟು ಕೇಳಲಿ: ರಾಹುಲ್

Published:
Updated:

ನವದೆಹಲಿ: 2014ರ ನಂತರ ಭಾರತದಲ್ಲಿ ಯಾವುದೇ ಭೀಕರ ಸ್ಫೋಟಗಳು ನಡೆದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ  ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಕಳೆದ  ಐದು ವರ್ಷಗಳಲ್ಲಿ 942 ಬಾಂಬ್ ದಾಳಿ ನಡೆದಿದೆ ಎಂದಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ನಕ್ಸಲ್‌ ಅಟ್ಟಹಾಸಕ್ಕೆ 16 ಬಲಿ

2014ರ ನಂತರ ಭಾರತದಲ್ಲಿ ಬಾಂಬ್ ಸದ್ದು ಕೇಳಲೇ ಇಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ಪುಲ್ವಾಮಾ, ಪಠಾಣ್‌ಕೋಟ್, ಉರಿ, ಗಡ್‌ಚಿರೋಲಿ ಸೇರಿದಂತೆ 942 ಭೀಕರ ಬಾಂಬ್ ದಾಳಿಗಳು ನಡೆದಿವೆ. ಪ್ರಧಾನಿ ಕಿವಿಗೊಟ್ಟು ಕೇಳಲಿ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ ಬುಧವಾರ ನಕ್ಸಲರು  ಐಇಡಿ ಸ್ಫೋಟಿಸಿದ್ದು ಇದರಲ್ಲಿ 15 ಪೊಲೀಸ್ ಕಮಾಂಡೊ ಮತ್ತು ನಾಗರಿಕರೊಬ್ಬರು ಹತ್ಯೆಯಾಗಿದ್ದರು.

ಇದನ್ನೂ ಓದಿ:  ಗಡ್‌ಚಿರೋಲಿ: ನಕ್ಸಲರ ಸುರಕ್ಷಿತ ತಾಣ

 

Post Comments (+)