ಬ್ಯಾಂಕು, ಅಂಚೆ ಕಚೇರಿ ಆಧಾರ್‌ ಕೇಂದ್ರಗಳ ಸೇವೆ ಅಬಾಧಿತ

7

ಬ್ಯಾಂಕು, ಅಂಚೆ ಕಚೇರಿ ಆಧಾರ್‌ ಕೇಂದ್ರಗಳ ಸೇವೆ ಅಬಾಧಿತ

Published:
Updated:

ನವದೆಹಲಿ: ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಜೋಡಣೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದರೂ ಬ್ಯಾಂಕ್‌ ಶಾಖೆಗಳು ಮತ್ತು ಅಂಚೆ ಕಚೇರಿಗಳಲ್ಲಿರುವ ಆಧಾರ್‌ ನೋಂದಣಿ ಮತ್ತು ಪರಿಷ್ಕರಣೆ ಕೇಂದ್ರಗಳು ಕಾರ್ಯನಿರ್ವಹಣೆ ಮುಂದುವರಿಸಲಿವೆ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ) ಹೇಳಿದೆ. 

ಆಧಾರ್‌ ಚೀಟಿಯನ್ನು ಗುರುತು ಪತ್ರವಾಗಿ ಬಳಸುವುದಕ್ಕೆ ಅವಕಾಶ ಇದೆ. ಬ್ಯಾಂಕುಗಳಲ್ಲಿ ಡಿಜಿಟಲ್‌ ದೃಢೀಕರಣ ಮಾತ್ರ ಮಾಡುವಂತಿಲ್ಲ. ಸಹಾಯಧನ ವರ್ಗಾವಣೆ, ಪ್ಯಾನ್‌–ಆದಾಯ ತೆರಿಗೆ ಸಲ್ಲಿಕೆಗಳಿಗೆ ಆಧಾರ್‌ ಬಳಕೆ ಸಾಂವಿಧಾನಿಕ. ಹಾಗಾಗಿ ಆಧಾರ್‌ ವ್ಯವಸ್ಥೆಯಲ್ಲಿ ಬ್ಯಾಂಕುಗಳ ಪಾತ್ರ ಇನ್ನಷ್ಟು ಮಹತ್ವ ಪಡೆದುಕೊಳ್ಳಲಿದೆ ಎಂದು ಯುಐಡಿಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ ಭೂಷಣ್ ಪಾಂಡೆ ಹೇಳಿದ್ದಾರೆ. 

ದೇಶದಲ್ಲಿ 60–70 ಕೋಟಿ ಜನರಲ್ಲಿ ಗುರುತು ಚೀಟಿಯಾಗಿ ಆಧಾರ್ ಮಾತ್ರ ಇದೆ. ಹಾಗಾಗಿ ಡಿಜಿಟಲ್‌ ಅಲ್ಲದ ರೂಪದಲ್ಲಿ ಆಧಾರ್‌ ಬಳಕೆ ಮುಂದುವರಿಯುತ್ತದೆ. ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳು ಈಗಾಗಲೇ ತಲಾ 13 ಸಾವಿರ ಆಧಾರ್‌ ಕೇಂದ್ರಗಳನ್ನು ತೆರೆದಿವೆ. ಇನ್ನಷ್ಟು ಕೇಂದ್ರಗಳನ್ನು ತೆರೆಯಲಾಗುವುದು ಎಂದು ಪಾಂಡೆ ತಿಳಿಸಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !