ಬ್ಯಾಂಕ್‌ ಖಾತೆ, ಸಿಮ್‌ ಕಾರ್ಡ್‌ಗೆ ಆಧಾರ್‌ ಸಂಖ್ಯೆ ಕಡ್ಡಾಯವಲ್ಲ

ಮಂಗಳವಾರ, ಮಾರ್ಚ್ 26, 2019
27 °C
ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಕೋವಿಂದ್ ಅಂಕಿತ

ಬ್ಯಾಂಕ್‌ ಖಾತೆ, ಸಿಮ್‌ ಕಾರ್ಡ್‌ಗೆ ಆಧಾರ್‌ ಸಂಖ್ಯೆ ಕಡ್ಡಾಯವಲ್ಲ

Published:
Updated:

ನವದೆಹಲಿ: ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಮತ್ತು ಮೊಬೈಲ್‌ ಸಿಮ್‌ ಕಾರ್ಡ್‌ ಪಡೆಯುವಾಗ ಗುರುತಿನ ಪುರಾವೆಯಾಗಿ ಆಧಾರ್‌ ಸಂಖ್ಯೆ ನಮೂದಿಸುವುದನ್ನು ಕಡ್ಡಾಯ ಮಾಡುವಂತಿಲ್ಲ ಎಂಬ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಶನಿವಾರ ಅಂಕಿತ ಹಾಕಿದ್ದಾರೆ.

ರಾಜ್ಯಸಭೆಯಲ್ಲಿ ಈ ಸುಗ್ರೀವಾಜ್ಞೆಗೆ ಅನುಮೋದನೆ ಸಿಗದಿದ್ದರಿಂದ ಅವಧಿ ಮುಗಿದ ಕಾರಣ ಕೇಂದ್ರ ಸರ್ಕಾರ ಈಗ ಮತ್ತೊಮ್ಮೆ ಸುಗ್ರೀವಾಜ್ಞೆ ಮೊರೆ ಹೋಗಿದೆ.

ಆಧಾರ್‌ ಕಾರ್ಡ್‌ ಬಳಕೆ ಮತ್ತು ಖಾಸಗಿತನ ಕಾಪಾಡಲು ರೂಪಿಸಿರುವ ನಿಯಮಗಳ ಉಲ್ಲಂಘನೆಗೆ ದಂಡ ವಿಧಿಸುವ ತಿದ್ದುಪಡಿ ಇರುವ ಮಸೂದೆಯನ್ನು ಜಾರಿಗೆ ತರಲು ಈ ಸುಗ್ರೀವಾಜ್ಞೆಗೆ ಕಳೆದ ವಾರ ಸಂಪುಟ ಅನುಮೋದನೆ ನೀಡಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !