ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ಸಿಗರೇ ನೀವು ಸಾರ್ವಜನಿಕ ಬದುಕಿನ ಮರ್ಯಾದೆ ಹಾಳು ಮಾಡ್ತಿದ್ದೀರಿ

Last Updated 6 ಮೇ 2018, 13:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಾಂಗ್ರೆಸ್‌ನ ತಾಯಿ-ಮಗನ ಮೇಲೆ ₹5000 ಕೋಟಿ ಅವ್ಯವಹಾರದ ಆರೋಪ ಇದೆ. ಕಾಂಗ್ರೆಸ್ ನಾಯಕರೇ ಕಿವಿ ತೆರೆದು ಕೇಳಿಸಿಕೊಳ್ಳಿ. ನೀವು ಗಡಿ ಮೀರಿದರೆ, ಮೋದಿ ಕೊಟ್ಟಿದ್ದನ್ನು ವಾಪಸ್ ಕೊಡಬೇಕಾಗುತ್ತದೆ ಎಂದು ಮೋದಿ ಎಚ್ಚರಿಸಿದರು.

'ಕುರುಡು ಕಾಂಚಾಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದೋರ ತುಳಿಯುತ್ತಲಿತ್ತು'  ಎಂದು ಈ ನೆಲದ ವರಕವಿ ಬೇಂದ್ರೆ  ಅವರ ಪದ್ಯ ಉದ್ಗರಿಸಿದ ಮೋದಿ, ಬೇಂದ್ರೆಯವರು ಈ ಕವನವನ್ನು ಕಾಂಗ್ರೆಸ್ ಆಡಳಿತ ಗಮನಿಸಿಯೇ ಬರೆದಿದ್ದರು ಎನಿಸುತ್ತದೆ. ಕಳೆದ ಐದು ವರ್ಷಗಳನ್ನು ನೆನಪಿಸಿಕೊಳ್ಳಿ. ಕಾಂಗ್ರೆಸ್‌ನ ಒಬ್ಬರಲ್ಲ ಒಬ್ಬರು ದುಡ್ಡು ಹೊಡೆದವರು ಸಿಕ್ಕಿಕೊಳ್ತಿದ್ದಾರೆ. 

ಕಾಂಗ್ರೆಸ್‌ ಪಕ್ಷದವರು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಆಧಾರ ರಹಿತ ಆರೋಪ ಮಾಡ್ತಾರೆ. ಇಲ್ಲಿಂದ ನಾನು ಸವಾಲು ಹಾಕ್ತೀನಿ. ಕಾಂಗ್ರೆಸ್ಸಿಗರೇ ನೀವು ಸಾರ್ವಜನಿಕ ಬದುಕಿನ ಮರ್ಯಾದೆ ಹಾಳು ಮಾಡ್ತಿದ್ದೀರಿ ಎಂದು ಕಾಂಗ್ರೆಸ್ ಮೇಲೆ ಮೋದಿ ಕಿಡಿಕಾರಿದರು‌.

ಕಾಂಗ್ರೆಸ್‌ನವರು ಹೊಡೆದ ದುಡ್ಡು ಯಾರದು? ಇದು ಜನರದ್ದು ಅಲ್ವಾ? ದೆಹಲಿಯಲ್ಲಿ ನಮ್ಮ ಸರ್ಕಾರ ಹೆಜ್ಜೆಯಿಟ್ಟರೆ ಕಾಂಗ್ರೆಸ್‌ನವರು ಹುಯಿಲೆಬ್ಬಿಸ್ತಾರೆ. ನಾವು ಸಾರ್ವಜನಿಕ ಬದುಕನ್ನು ಗೌರವಿಸುತ್ತೇವೆ. ನೀವು 'ನಾಮ್‌ದಾರ್‌'ರು ಅಂತ ನನಗೆ ಗೊತ್ತು. ಬಡವರ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT