ಲೋಕಸಭೆ ಟಿಕೆಟ್‌ ನೀಡಲು ಕೇಜ್ರಿವಾಲ್‌ 6 ಕೋಟಿ ಪಡೆದಿದ್ದಾರೆ: ಉದಯ್ ಜಖರ್ ಆರೋಪ

ಶನಿವಾರ, ಮೇ 25, 2019
32 °C

ಲೋಕಸಭೆ ಟಿಕೆಟ್‌ ನೀಡಲು ಕೇಜ್ರಿವಾಲ್‌ 6 ಕೋಟಿ ಪಡೆದಿದ್ದಾರೆ: ಉದಯ್ ಜಖರ್ ಆರೋಪ

Published:
Updated:

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನನ್ನ ತಂದೆಗೆ ಪಶ್ಚಿಮ ದೆಹಲಿಯ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲು ಆರು ಕೋಟಿ ಹಣ ಪಡೆದಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡನ ಪುತ್ರ ಉದಯ್ ಜಖರ್ ಆರೋಪಿಸಿದ್ದಾರೆ.

ಉದಯ್ ಜಖಡ್, ಆಮ್‌ ಆದಿ ಪಕ್ಷದ ಮುಖಂಡ ಬಲಬೀರ್ ಸಿಂಗ್ ಜಖರ್ ಪುತ್ರ.

ಮೇ 12ರಂದು ದೆಹಲಿಯಲ್ಲಿ ಲೊಕಸಭಾ ಚುನಾವಣೆ ನಡೆಯಲಿದ್ದು, ಇದೀಗ ಆಪ್ ಭ್ರಷ್ಟಾಚಾರದ ಹೊರೆ ಹೊತ್ತುಕೊಂಡಂತಾಗಿದೆ. 

ನನ್ನ ತಂದೆ ಮೂರು ತಿಂಗಳ ಹಿಂದೆ ಆಪ್‌ ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ ಪಶ್ಚಿಮ ದೆಹಲಿಯ ಲೋಕಸಭಾ ಕಣದ ಟಿಕೆಟ್‌ಗಾಗಿ ಆರು ಕೋಟಿ ಹಣವನ್ನು ಕೇಜ್ರಿವಾಲ್ ಹಾಗೂ ಆಪ್‌ ಸಮಿತಿಯ ಸದಸ್ಯ ಗೋಪಾಲ್ ರೈಗೆ ಕೊಟ್ಟಿದ್ದಾರೆ. ಇದರ ಬಗ್ಗೆ ನನ್ನ ಬಳಿ ಸಾಕ್ಷ್ಯವಿದೆ ಎಂದು ಉದಯ್ ಹೇಳಿದ್ದಾರೆ.

ಇದೇ ವೇಳೆ ನನ್ನ ತಂದೆ ಅಣ್ಣಾ ಹಜಾರೆ ಅವರ ಯಾವುದೇ ಚಳವಳಿಗಳಲ್ಲಿಯೂ ಭಾಗಿಯಾಗದಿದ್ದರೂ ಟಿಕೆಟ್ ನೀಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಮಗನ ಆರೋಪವನ್ನು ಅಲ್ಲಗಳೆದಿರುವ ಬಲಬೀರ್, ಉದಯ್ ನನ್ನ ಜೊತೆ ವಾಸವಿಲ್ಲ. ಅಲ್ಲದೇ ಅಭ್ಯರ್ಥಿಯ ಆಯ್ಕೆಯ ಬಗ್ಗೆ ನನ್ನ ಮಗನ ಬಳಿ ಚರ್ಚಿಸಿಲ್ಲ ಎಂದಿದ್ದಾರೆ.

ದೆಹಲಿಯ ಏಳು ಲೋಕಸಭಾ ಕ್ಷೇತ್ರದ ಕೊನೆಯ ಅಭ್ಯರ್ಥಿಯಾಗಿ ಬಲಬೀರ್ ಅವರನ್ನು ಮಾರ್ಚ್ 17ರಂದು ಆಪ್ ಘೋಷಿಸಿತ್ತು. ಮಾರ್ಚ್‌ 2ರಂದು ಉಳಿದ ಆರು ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು.‌

ಬಿಜೆಪಿ ಒತ್ತಾಯ

ಇದೊಂದು ಬಹಳ ಗಂಭೀರ ವಿಚಾರ. ಈ ಬಗ್ಗೆ ಚುನಾವಣಾ ಆಯೋಗವು ತಕ್ಷಣವೇ ತನಿಖೆ ಕೈಕೊಳ್ಳಬೇಕು. ಕೇಜ್ರಿವಾಲ್, ಗೋಪಾಲ ರೈ, ಬಲಬೀರ್ ಈ ಮೂವರಿಗೂ ನೋಟಿಸ್ ನೀಡಬೇಕು ಎಂದು ದೆಹಲಿಯ ಬಿಜೆಪಿ ಅಭ್ಯರ್ಥಿ ಪ್ರವೀಣ್ ಖಂಡೆವಾಲಾ ಒತ್ತಾಯಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !