ಎಎಪಿ ಮುಖಂಡ ಅಶುತೋಷ್‌ ರಾಜೀನಾಮೆ

7
ನಿರ್ಧಾರ ಮರುಪರಿಶೀಲನೆಗೆ ಪಕ್ಷದ ಮನವಿ

ಎಎಪಿ ಮುಖಂಡ ಅಶುತೋಷ್‌ ರಾಜೀನಾಮೆ

Published:
Updated:
Deccan Herald

ನವದೆಹಲಿ: ತೀರಾ ವೈಯಕ್ತಿಕ ಕಾರಣಗಳನ್ನು ನೀಡಿ ಎಎಪಿ ಮುಖಂಡ ಅಶುತೋಷ್‌ ಅವರು ರಾಜೀನಾಮೆ ನೀಡಿದ್ದಾರೆ. ಆದರೆ ರಾಜೀನಾಮೆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪಕ್ಷ ಮನವಿ ಮಾಡಿದೆ.

‘ಪ್ರತಿಯೊಂದು ಪ್ರಯಣಕ್ಕೂ ಒಂದು ಅಂತ್ಯ ಇರುತ್ತದೆ. ಎಎಪಿ ಜತೆಗೂ ನನ್ನ ಸಂಬಂಧ ಸುಂದರ ಮತ್ತು ಕ್ರಾಂತಿಕಾರಕವಾಗಿತ್ತು. ಇದೀಗ ಅಂತ್ಯವಾಗುತ್ತಿದೆ. ನಾನೀಗ ರಾಜೀನಾಮೆ ನೀಡುತ್ತಿದ್ದೇನೆ. ಸಂಸದೀಯ ಸಮಿತಿ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ಮನವಿ ಮಾಡಿದ್ದೇನೆ’ ಎಂದು ಅಶುತೋಷ್‌ ತಿಳಿಸಿದ್ದಾರೆ. ಇದೇ ವೇಳೆ ತಮಗೆ ಬೆಂಬಲ ನೀಡಿದವರಿಗೆ ಕೃತಜ್ಞತೆ ಹೇಳಿದ್ದಾರೆ.

‘ಅಶುತೋಷ್‌ ಅವರ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಹಿಂದಕ್ಕೆ ಪಡೆಯುವಂತೆ ಕೇಳಲಾಗಿದೆ’ ಎಂದು ಎಎಪಿ ದೆಹಲಿ ಘಟಕದ ವಕ್ತಾರ ಸೌರಭ್‌ ಭಾರಧ್ವಜ್‌ ತಿಳಿಸಿದ್ದಾರೆ.

ಪತ್ರಕರ್ತರಾಗಿದ್ದ ಅಶುತೋಷ್‌ ಅವರು ರಾಜಕಾರಣಕ್ಕೆ ಪ್ರವೇಶಿಸಿ 2014 ರ ಲೋಕಸಭೆ ಚುನಾವಣೆಗೆ ಚಾಂದಿನಿ ಚೌಕ್‌ದಿಂದ ಎಎಪಿ ಟಿಕೆಟ್‌ ‍ಪಡೆದು ಸ್ಪರ್ಧಿಸಿದ್ದರು.

‘ರಾಜೀನಾಮೆ ಹಿಂದಕ್ಕೆ ಪಡೆಯುಂತೆ ಮನವಿ ಮಾಡಲಾಗುವುದು’ ಎಂದು ರಾಜ್ಯಸಭಾ ಸದಸ್ಯ ಹಾಗೂ ಪಕ್ಷದ ಹಿರಿಯ ಮುಖಂಡ ಸಂಜಯ್‌ ಸಿಂಗ್‌ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

  • 3

    Happy
  • 0

    Amused
  • 1

    Sad
  • 1

    Frustrated
  • 2

    Angry

Comments:

0 comments

Write the first review for this !