ಮಂಗಳವಾರ, ಮಾರ್ಚ್ 9, 2021
18 °C

ಆರೋಗ್ಯ ಸೇತು ಆ್ಯಪ್‌ ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆ: ರಾಹುಲ್ ಗಾಂಧಿ‌ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ವೈರಸ್‌ ಸೋಂಕಿತರ ಮೇಲೆ ನಿಗಾವಹಿಸುವ ಆರೋಗ್ಯ ಸೇತು ಆ್ಯಪ್‌ನ ಸುರಕ್ಷತೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರು ಶನಿವಾರ (ಮೇ–2) ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ‘ಆರೋಗ್ಯ ಸೇತು ಆ್ಯಪ್‌ ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆಯಾಗಿದೆ. ಇದರ ನಿರ್ವಹಣೆಯನ್ನು ಹೊರಗಿನ ಖಾಸಗಿ ಆಪರೇಟರ್‌ಗಳಿಗೆ ನೀಡಲಾಗಿದೆ. ಆದರೆ, ಇದರ ಮೇಲೆ ಸರ್ಕಾರದ ನಿಯಂತ್ರಣವೇ ಇಲ್ಲ. ಇದರಿಂದ ದತ್ತಾಂಶ ಮತ್ತು ಖಾಸಗಿತನಕ್ಕೆ ಸಂಬಂಧಿಸಿದಂತೆ ಗಂಭೀರ ಆತಂಕವಿದೆ.  ತಂತ್ರಜ್ಞಾನ ಯಾವಾಗಲೂ ನಮ್ಮನ್ನು ಸುರಕ್ಷಿತವಾಗಿಡಲು ನೆರವಾಗಬೇಕೆ ವಿನಾ ನಾಗರಿಕರಿಗೆ ಅರಿವಿಲ್ಲದಂತೆ ಅವರ ಮಾಹಿತಿ ಕಬಳಿಸುವ ಭಯ ಹುಟ್ಟಿಸುವಂತಿರಬಾರದು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. 

ಇದನ್ನೂ ಓದಿ: ಸಂಪಾದಕೀಯ | ಆರೋಗ್ಯ ಸೇತು: ಅಗತ್ಯ ಹೌದು, ಬೇಕು ಕಾನೂನಿನ ಚೌಕಟ್ಟು

ಕೋವಿಡ್–19 ವಿರುದ್ಧದ ಹೋರಾಟದಲ್ಲಿ ದೇಶವು ತಂತ್ರಜ್ಞಾನದ ನೆರವನ್ನೂ ಪಡೆದುಕೊಂಡಿದೆ. ಸ್ಮಾರ್ಟ್‌ಫೋನ್‌ ಹೊಂದಿರುವ ವ್ಯಕ್ತಿಗಳು ಆರೋಗ್ಯ ಸೇತು ಎನ್ನುವ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಅದು ನೀಡುವ ಸಲಹೆ– ಸೂಚನೆಗಳ ಮೂಲಕ ತಮ್ಮನ್ನು ಸುರಕ್ಷಿತವಾಗಿಸಿಕೊಳ್ಳುವ ಯತ್ನದ ಮೊರೆ ಹೋಗಬಹುದು.

ಇದನ್ನೂ ಓದಿ: ಕೋವಿಡ್–19ನಿಂದ ರಕ್ಷಣೆ: ಸೋಂಕಿತರು ಹತ್ತಿರ ಬಂದರೆ ಎಚ್ಚರಿಸುವ ಆ್ಯಪ್!

ಇದರ ಬಳಕೆದಾರರು ಆ್ಯಪ್‌ ಮೂಲಕವೇ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿ, ತಮ್ಮ ದೇಹದಲ್ಲಿ ಕಾಣಿಸಿಕೊಂಡಿರುವ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿ, ತಾವು ಕಳೆದ 14 ದಿನಗಳ ಅವಧಿಯಲ್ಲಿ ಎಲ್ಲೆಲ್ಲಿಗೆ ಭೇಟಿ ನೀಡಿದ್ದೆವು ಎಂಬುದನ್ನು ತಿಳಿಸಿ, ತಾವು ಕೊರೊನಾ ವೈರಾಣುವಿಗೆ ತುತ್ತಾಗಿರುವ ಸಾಧ್ಯತೆ ಇದೆಯೇ ಎಂಬುದನ್ನು ಕಂಡುಕೊಳ್ಳಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು