ಶುಕ್ರವಾರ, ನವೆಂಬರ್ 22, 2019
26 °C
ದೇವೇಂದ್ರ ವಿ. ದರ್ದ ಉಪಾಧ್ಯಕ್ಷರು

ಆಡಿಟ್‌ ಬ್ಯೂರೊ ಆಫ್‌ ಸರ್ಕ್ಯುಲೇಶನ್‌ ಅಧ್ಯಕ್ಷರಾಗಿ ಮಧುಕರ್ ಕಾಮತ್‌ ಆಯ್ಕೆ

Published:
Updated:
Prajavani

ಮುಂಬೈ: ಆಡಿಟ್‌ ಬ್ಯೂರೊ ಆಫ್‌ ಸರ್ಕ್ಯುಲೇಶನ್‌ಗೆ (ಎಬಿಸಿ) 2019–20ನೇ ಸಾಲಿನ ಅಧ್ಯಕ್ಷರಾಗಿ ಮಧುಕರ್‌ ಕಾಮತ್‌ (ಜಾಹೀರಾತು ಸಂಸ್ಥೆಗಳ ಪ್ರತಿನಿಧಿ) ಹಾಗೂ ಉಪಾಧ್ಯಕ್ಷರಾಗಿ ದೇವೇಂದ್ರ ವಿ. ದರ್ದ (ಪ್ರಕಾಶಕರ ಪ್ರತಿನಿಧಿ) ಅವರು ಆಯ್ಕೆಯಾಗಿದ್ದಾರೆ. ಕಾಮತ್‌ ಅವರು ಡಿಡಿಬಿ ಮುದ್ರಾ ಪ್ರೈ.ಲಿ. ಸಂಸ್ಥೆಯ ಪ್ರತಿನಿಧಿಯಾಗಿದ್ದರೆ, ದರ್ದ ಅವರು ಲೋಕಮತ್‌ ಮೀಡಿಯಾ ಪ್ರೈ.ಲಿ. ಸಂಸ್ಥೆಯ ಪ್ರತಿನಿಧಿಯಾಗಿದ್ದಾರೆ.

ಜಾಹೀರಾತು ಕ್ಷೇತ್ರದಲ್ಲಿ ನಾಲ್ಕು ದಶಕಗಳ ಕಾಲ ದುಡಿದ ಅನುಭವ ಹೊಂದಿರುವ ಕಾಮತ್‌ ಅವರು ಭಾರತೀಯ ಜಾಹೀರಾತು ಸಂಸ್ಥೆಗಳ ಸಂಘ (ಎಎಎಐ) ಹಾಗೂ ದಿ ಅಡ್ವರ್ಟೈಸಿಂಗ್‌ ಸ್ಟಾಂಡರ್ಡ್ಸ್‌ ಕೌನ್ಸಿಲ್‌ ಆಫ್‌ ಇಂಡಿಯಾದ (ಎಎಸ್‌ಸಿಐ) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಸಕ್ತ ಅವರು ಡಿಡಿಬಿ ಮುದ್ರಾ ಗ್ರೂಪ್‌ನ ಗೌರವಾಧ್ಯಕ್ಷ ಹಾಗೂ ಇಂಟರ್‌ ಬ್ರಾಂಡ್‌ ಇಂಡಿಯಾದ ಮಾರ್ಗದರ್ಶಿಯಾಗಿದ್ದಾರೆ.

ಪ್ರತಿಕ್ರಿಯಿಸಿ (+)