ದಪ್ಪ, ಅಂದವಿಲ್ಲದ ಹುಡುಗಿಯರು ನನ್ನ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡುತ್ತಿದ್ದಾರೆ

7
ಗಾಯಕ ಅಭಿಜೀತ್ ಪ್ರತಿಕ್ರಿಯೆ

ದಪ್ಪ, ಅಂದವಿಲ್ಲದ ಹುಡುಗಿಯರು ನನ್ನ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡುತ್ತಿದ್ದಾರೆ

Published:
Updated:

ಮುಂಬೈ: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅರ್ಜುನ್  ರಣತುಂಗ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳೆಯೇ ಬಾಲಿವುಡ್ ಗಾಯಕ ಅಭಿಜೀತ್ ಭಟ್ಟಾಚಾರ್ಯ ವಿರುದ್ಧ ಫೇಸ್‍ಬುಕ್‍ನಲ್ಲಿ ಆರೋಪ ಹೊರಿಸಿದ್ದಾರೆ.

ಕೊಲ್ಕತ್ತಾದಲ್ಲಿ 20 ವರ್ಷಗಳ ಹಿಂದೆ ಈ ಘಟನೆ ನಡೆದಿತ್ತು ಎಂದು ಆಕೆ ಫೇಸ್‌ಬುಕ್‍ನಲ್ಲಿ ಬರೆದಿದ್ದಾರೆ.

ಈ ಆರೋಪದ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಡಾಟ್ ಕಾಂ ಅಭಿಜೀತ್ ಜತೆ ಮಾತನಾಡಿದಾಗ, ಆರೋಪವನ್ನು ನಿರಾಕರಿಸಿದ ಅವರು ನಾನು ಆ ವೇಳೆ ಹುಟ್ಟಿಯೇ ಇರಲಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆಯೂ ಅಭಿಜೀತ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು.

 ಈ ಆರೋಪದ ಬಗ್ಗೆ ಯಾರೋ ಒಬ್ಬರು ನನಗೆ ಕರೆ ಮಾಡಿ ಹೇಳಿದ್ದರು. ನಾನು ಆ ವೇಳೆ ಹುಟ್ಟಿಯೇ ಇರಲಿಲ್ಲ. ನಾನು ನನ್ನ ಜೀವಿತಾವಧಿಯಲ್ಲಿ ಪಬ್‌‍ಗೇ ಹೋಗಿಲ್ಲ. ನನ್ನ ಹೆಸರನ್ನು ನೀವು ಯಾವುದೇ ಪೇಜ್ 3 ಅಥವಾ ಸಿನಿಮಾ ಪಾರ್ಟಿಗಳಲ್ಲಿ ಕಾಣಲು ಸಾಧ್ಯವಿಲ್ಲ. ನನ್ನ ಹೆಸರು ಮಾರಾಟವಾಗುತ್ತದೆ. ಇದರಿಂದ ಯಾರಿಗಾದರೂ ಉಪಕಾರ ಆಗುವುದಾದರೆ ಒಳ್ಳೆಯದೇ. ನನ್ನ ಹೆಸರಲ್ಲಿ ಅವರ ಹೊಟ್ಟೆಗೆ ರೊಟ್ಟಿ ಸಿಗುವುದಾದರೆ ಒಳ್ಳೆಯದು.

ಫ್ಲೈಟ್ ಅಟೆಂಡೆಂಟ್ ಮಾಡಿದ ಆರೋಪದಲ್ಲಿ ಆಕೆಯ ರೂಂಮೇಟ್‍ನ ಗೆಳೆಯ ನೀವು ಎಂದು ಹೇಳಿದ್ದಾರೆ ಅಲ್ವಾ? ಎಂದಾಗ, ನನ್ನ ಮೇಲೆ ಆರೋಪ ಹೊರಿಸುವ ದಪ್ಪ, ಅಂದವಿಲ್ಲದ ಹುಡುಗಿಯರತ್ತ ಗಮನ ನೀಡುವುದಿಲ್ಲ ಎಂದಿದ್ದಾರೆ ಅಭಿಜೀತ್.

ನಾನು ಯಾರ ವಿರುದ್ಧ ಕ್ರಮ ತೆಗೆದುಕೊಳ್ಳಲಿ ಎಂಬುದು ಗೊತ್ತಾಗುತ್ತಿಲ್ಲ. ಆ ವ್ಯಕ್ತಿ ಬಗ್ಗೆ ನಾನು ಯಾಕೆ ಗಮನ ನೀಡಲಿ? ನೀವೆ ಅವರಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದೀರಿ. ಈಗ ಈ ರೀತಿ ಆರೋಪ ಮಾಡುತ್ತಿರುವವರೆಲ್ಲಾ ಕೊಳಕು, ಕುರೂಪಿಗಳೇ. ಕೆಲವರು ದಪ್ಪ ಇದ್ದರೆ, ಕೆಲವರು ತೆಳ್ಳಗೆ. ಅವರತ್ತ ಗಮನ ಹರಿಸುವ ಅಗತ್ಯವಿಲ್ಲ. ಗಮನ ಸೆಳೆಯುವುದಕ್ಕಾಗಿ ಅವರು  ಮುಂದೆ ಬರುತ್ತಿದ್ದಾರೆ. ದಪ್ಪಗಿರುವ, ಕುರೂಪಿ ಹುಡುಗಿಯರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ, ನಾನು ಆ ವೇಳೆ ಹುಟ್ಟಿಯೇ ಇರಲಿಲ್ಲ ಎಂದು ನಗುತ್ತಾ  ಪ್ರತಿಕ್ರಿಯಿಸಿದ್ದಾರೆ.
 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !