ನಟ ಮಹೇಶ್‌ ಆನಂದ್ ಇನ್ನಿಲ್ಲ

7

ನಟ ಮಹೇಶ್‌ ಆನಂದ್ ಇನ್ನಿಲ್ಲ

Published:
Updated:
Prajavani

ಮುಂಬೈ: ಹಲವು ಯಶಸ್ವಿ ಚಲನಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿ ಗಮನಸೆಳೆದಿದ್ದ ಮಹೇಶ್‌ ಆನಂದ್‌ (57) ಶನಿವಾರ ನಿಧನರಾದರು.

80 ಮತ್ತು 90ರ ದಶಕದ ಚಲನಚಿತ್ರಗಳಲ್ಲಿ ಖಳನಾಯಕ ನಟರಾಗಿದ್ದ ಮಹೇಶ್‌ ಅಪಾರ ಜನಪ್ರಿಯತೆ ಗಳಿಸಿದ್ದರು. ನಟ ಗೋವಿಂದ್‌ ಅವರ ‘ರಂಗೀಲಾ ರಾಜಾ’ ಚಲನಚಿತ್ರ ಮಹೇಶ್‌ ನಟಿಸಿದ್ದ ಕೊನೆಯ ಚಿತ್ರವಾಗಿತ್ತು. ಕಳೆದ ತಿಂಗಳು ಜನವರಿ 18ರಂದು ಈ ಚಿತ್ರ ಬಿಡುಗಡೆಯಾಗಿತ್ತು.

 18 ವರ್ಷಗಳ ಬಳಿಕ  ‘ರಂಗೀಲಾ ರಾಜಾ’ದಲ್ಲಿ ಮಹೇಶ್‌ಗೆ ಮೊದಲ ಬಾರಿ ಅವಕಾಶ ದೊರೆತಿತ್ತು. 18 ವರ್ಷಗಳ ಕಾಲ ಯಾವುದೇ ಚಲನಚಿತ್ರದಲ್ಲಿ ಅವಕಾಶ ದೊರೆಯದ ಕಾರಣ ಕುಸ್ತಿ ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸುದೀರ್ಘ ಕಾಲ ಅವಕಾಶಗಳು ದೊರೆಯದ ಕಾರಣ ಹಣಕಾಸಿನ ಸಮಸ್ಯೆ ಎದುರಿಸಿದ್ದರು ಎಂದು ವರದಿಯಾಗಿದೆ.

ಕುರುಕ್ಷೇತ್ರ, ಸ್ವರ್ಗ, ಕೂಲಿ ನಂ.1, ವಿಜೇತ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಅವರು ನಟಿಸಿದ್ದರು. ಬಾಲಿವುಡ್‌ ನಟರಾದ ಧರ್ಮೇಂದ್ರ, ಸನ್ನಿ ಡಿಯೋಲ್‌,  ಅಮಿತಾಭ್‌ ಬಚ್ಚನ್‌ ಸೇರಿದಂತೆ ಹಲವು ಖ್ಯಾತನಾಮರ ಜತೆ ಅವರು ನಟಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !