ಮಂಗಳವಾರ, ಜೂನ್ 2, 2020
27 °C

ರಾಮಾಯಣ ಧಾರಾವಾಹಿಯ ಸುಗ್ರೀವನ ಪಾತ್ರಧಾರಿ ನಿಧನ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಮಾನಂದ ಸಾಗರ ಅವರ ನಿರ್ದೇಶನ, ನಿರ್ಮಾಣದ 1987ರ ರಾಮಾಯಣ ಧಾರಾವಾಹಿಯಲ್ಲಿ ಸುಗ್ರೀವನ ಪಾತ್ರ ನಿರ್ವಹಿಸಿದ್ದ ಶ್ಯಾಮ ಸುಂದರ್‌ ಕಲಾನಿ ಅವರು ನಿಧನರಾಗಿದ್ದಾರೆ. 

ಕ್ಯಾನ್ಸರ್‌ನಿಂದ ಭಾದಿತರಾಗಿದ್ದ ಅವರು ಏ.6ರಂದು ಹರಿಯಾಣದ ಕಲ್ಕಾ ಎಂಬಲ್ಲಿ ಇಹಲೋಕ ತ್ಯಜಿಸಿದ್ದಾರೆ. 

ಈ ಕುರಿತು ಟ್ವೀಟ್‌ ಮಾಡಿರುವ ರಾಮಯಣದ ರಾಮನ ಪಾತ್ರಧಾರಿ ಅರುಣ್‌ ಗೋವಿಲ್‌, ‘ರಮಾನಂದ ಸಾಗರ ಅವರ ರಾಮಾಯಣ ಧಾರಾವಾಹಿಯಲ್ಲಿ ಸುಗ್ರೀವನ ಪಾತ್ರ ನಿರ್ವಹಿಸಿದ್ದ ಶ್ಯಾಮಸುಂದರ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಅವರೊಬ್ಬ ಉತ್ತಮ ವ್ಯಕ್ತಿ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ,' ಎಂದು ಟ್ಚೀಟ್‌ ಮಾಡಿದ್ದಾರೆ. 

1987ರ ರಾಮಾಯಣ ಧಾರಾವಾಹಿಯನ್ನು ಕೊರೊನಾ ವೈರಸ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ, ಪ್ರೇಕ್ಷಕರ ಒತ್ತಾಯದ ಮೇರೆ ದೂರದರ್ಶನದಲ್ಲಿ ಮರು ಪ್ರಸಾರ ಮಾಡಲಾಗುತ್ತಿದೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು