ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಎಲ್‌ವಿ –ಸಿ 43 ರಾಕೆಟ್‌ ಯಶಸ್ವಿ ಉಡಾವಣೆ

Last Updated 29 ನವೆಂಬರ್ 2018, 5:05 IST
ಅಕ್ಷರ ಗಾತ್ರ

ಶ್ರೀಹರಿಕೋಟಾ: ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ (ಹೈಸಿಸ್) ಒಳಗೊಂಡಒಟ್ಟು 31 ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಗುರುವಾರಶ್ರೀಹರಿಕೋಟಾ­ದಿಂದ ಯಶಸ್ವಿಯಾಗಿ ಉಡಾವಣೆ ಮಾಡಿತು.

ಭೂಮಿಯ ಮೇಲ್ಮೈನ ಅಧ್ಯಯನ, ಸಂವಹನ ಸೇವೆ,ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ವೈಜ್ಞಾನಿಕ ಸಂಶೋಧನೆ ಸೇರಿಮಾಹಿತಿ ಕ್ರಾಂತಿಯನ್ನು ಸೃಷ್ಟಿಸಬಲ್ಲ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ–ಸಿ 43 ರಾಕೆಟ್, ಬೆಳಿಗ್ಗೆ 9.58ಕ್ಕೆ ನಭಕ್ಕೆ ಚಿಮ್ಮಿತು

ಭೂ ವಿಚಕ್ಷಣಾ (ಹೈಸಿಸ್) ಉಪಗ್ರಹ 380 ಕೆ.ಜಿ.ತೂಕ ಹೊಂದಿದೆ. ಅಮೆರಿಕದ 23 ಉಪಗ್ರಹ ಸೇರಿ ಸ್ಪೇನ್, ಕೆನಡಾ, ಫಿನ್‌ಲ್ಯಾಂಡ್, ಮಲೇಷ್ಯಾ, ಆಸ್ಟ್ರೇಲಿಯಾ, ಕೊಲಂಬಿಯಾ, ನೆದರ್ಲೆಂಡ್‌ನ ತಲಾ ಒಂದು ಉಪಗ್ರಹಗಳು ಇದರಲ್ಲಿ ಸೇರಿವೆ. ಒಂದು ಮೈಕ್ರೊ ಹಾಗೂ 29 ನಾನ್ಯೋ ಉಪಗ್ರಹಗಳು ಇವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT