ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ವಸುಂಧರಾ ರಾಜೇ ಕುರಿತ ಹೇಳಿಕೆ: ಶರದ್‌ ಯಾದವ್‌ ವಿಷಾದ 

Last Updated 8 ಡಿಸೆಂಬರ್ 2018, 14:43 IST
ಅಕ್ಷರ ಗಾತ್ರ

ನವದೆಹಲಿ: ನನ್ನ ಮಾತುಗಳಿಂದ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಹಾಗೂ ಅವರಿಗೆ ಪತ್ರ ಬರೆಯುತ್ತೇನೆ ಎಂದು ಜೆಡಿಯು ಮಾಜಿ ನಾಯಕ ಶರದ್ ಯಾದವ್‌ ಶನಿವಾರ ತಿಳಿಸಿದ್ದಾರೆ.

ವಸುಂಧರಾ ರಾಜೇ ಅವರ ಹೇಳಿಕೆಯನ್ನು ಗಮನಿಸಿದ್ದೇನೆ, ನಾನು ಮತ್ತು ಅವರ ಕುಟುಂಬದವರು ತುಂಬಾ ಹಳೆಯ ಗೆಳೆಯರು ಅವರಿಗೆ ನೋವಾಗಿದ್ದರೆ ಅವರಲ್ಲಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.

ಕಳೆದ ಬುಧವಾರ ಚುನಾವಣಾ ಸಮಾವೇಶವೊಂದರಲ್ಲಿ ಶರದ್‌ ಯಾದವ್‌ ವಸುಂಧರಾ ರಾಜೇ ವಿರುದ್ಧ ವಿವಾದಾತ್ಮ ಹೇಳಿಕೆ ನೀಡಿದ್ದರು.ಅಲ್ವಾರ್‌ನಲ್ಲಿ ಮಾತನಾಡುತ್ತ ’ವಸುಂಧರಾ ಅವರಿಗೆ ವಿಶ್ರಾಂತಿ ನೀಡಿ, ಅವರು ತುಂಬಾ ಸುಸ್ತಾಗಿದ್ದಾರೆ. ಈಗ ಅವರು ದಪ್ಪ ಆಗಿದ್ದಾರೆ, ಮೊದಲು ತೆಳ್ಳಗಿದ್ದರು, ನಮ್ಮ ಮಧ್ಯಪ್ರದೇಶದ ಮಗಳು ಎಂದಿದ್ದರು’. ಶರದ್‌ ಮಾತನಾಡಿದ್ದ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಶರದ್‌ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

ಶುಕ್ರವಾರ ಮತದಾನ ಮಾಡಿದ ಬಳಿಕ ಶರದ್‌ ಹೇಳಿಕೆ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ರಾಜೇ, ನಾನು ದಿಗ್ಭ್ರಮೆಗೊಂಡಿದ್ದೇನೆ. ಅವರು ಮಹಿಳೆಯರನ್ನು ಅವಮಾನಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಯುವ ಜನರ ಮುಂದೆ ಅವರು ನೀಡುವ ಉದಾಹರಣೆ ಇದೇನಾ? ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳು ಮಾತಿನಲ್ಲಿ ಹಿಡಿತವಿಟ್ಟುಕೊಳ್ಳಲಿ ಎಂದಿದ್ದರು.

ಶರದ್‌ ಯಾದವ್‌ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಅವರು ಕ್ಷಮೆ ಕೋರಬೇಕು ಎಂದು ಬಿಜೆಪಿ ಅಗ್ರಹಿಸಿತ್ತು. ಸಿಪಿಐ (ಎಂ) ನಾಯಕಿ ಬೃಂದಾ ಕಾರಟ್‌ ಸಹ ಶರದ್‌ ಯಾದವ್‌ ರಾಜೇ ಅವರ ಕ್ಷಮೆಯಾಚಿಸಬೇಕು ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT