ವೀನಸ್ಗೆ ಜಯ: ಏಳು ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಗಳ ಒಡತಿ ಅಮೆರಿಕದ ವೀನಸ್ ವಿಲಿಯಮ್ಸ್ 7–5, 6–4ರಲ್ಲಿ ನತಾಲಿಯಾ ಅವರನ್ನು ಮಣಿಸಿದರು. ರಷ್ಯಾದ ನತಾಲಿಯಾ ವಿಶ್ವ ರ್ಯಾಂಕಿಂಗ್ನಲ್ಲಿ 88ನೇ ಸ್ಥಾನದಲ್ಲಿ ಇದ್ದಾರೆ. ಒಂಬತ್ತನೇ ಶ್ರೇಯಾಂಕದ ಜೆಕ್ ಗಣರಾಜ್ಯದ ಆಟಗಾರ್ತಿ ಪೆಟ್ರಾ ಕ್ವಿಟೋವಾ 7–5, 3–6, 6–3ರಲ್ಲಿ ಬೆಲಾರಸ್ನ ಆರ್ಯನಾ ಸೆಬಾಲೆಂಕಾ ಎದುರು ಗೆದ್ದರು.