6 ದಿನಗಳ ನಂತರ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಸಹಾಯ ತಲುಪಿತು‍!

7

6 ದಿನಗಳ ನಂತರ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಸಹಾಯ ತಲುಪಿತು‍!

Published:
Updated:

ತ್ರಿಶ್ಶೂರ್: ಡಿವೈನ್ ರಿಲೀಫ್ ಸೆಂಟರ್ ಎಂಬ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಸುತ್ತಲೂ ನೀರು ತುಂಬಿಕೊಂಡಿದ್ದು ಇಲ್ಲಿ 400 ರೋಗಿಗಳಿದ್ದಾರೆ. ನೆರೆ ಸಂತ್ರಸ್ತರಿಗೆ ಸಹಾಯ ಮಾಡುವ ತಂಡ ಅಲ್ಲಿಗೆ ತಲುಪಬೇಕಾದರೆ 6 ದಿನಗಳೇ ಬೇಕಾಯಿತು ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆ ವರದಿ ಮಾಡಿದೆ.

ಶನಿವಾರ ಇಲ್ಲಿನ ಚಾಲಕ್ಕುಡಿ ಸಮೀಪದ ಮುರಿಯನೂರ್ ಎಂಬಲ್ಲಿರುವ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ವೈದ್ಯಕೀಯ ಸಹಾಯ ತಂಡ ತಲುಪಿದಾಗ ಅಲ್ಲಿನ ರೋಗಿಗಳು ಸಹಾಯಕ್ಕಾಗಿ ಕಾದುಕುಳಿತಿದ್ದರು.

ಪುನರ್ವಸತಿ ಕೇಂದ್ರಕ್ಕೆ ಹೋಗುವ ರಸ್ತೆ ನೀರಿನಲ್ಲಿ ಮುಳುಗಡೆಯಾಗಿತ್ತು, ಸಹಾಯ ತಂಡ ಅಲ್ಲಿಗೆ ತಲುಪುವ ಹೊತ್ತಲ್ಲಿ ಸ್ಥಳೀಯ ಬ್ಲಾಕ್ ಪಂಚಾಯತ್ ಸದಸ್ಯ ಥೋಮಸ್ ಆಸ್ಪತ್ರೆಯ ಬಾಗಿಲಿನಲ್ಲಿ ಚಿಕ್ಕ ಬೋಟ್ ನೊಂದಿಗೆ ಕಾದು ನಿಂತಿದ್ದರು,
ಈ ಪುನರ್ವಸತಿ ಕೇಂದ್ರದ ಬಳಿ ಫಾರ್ಮ್ ಇದೆ, ಅದೂ ನೀರಿನಿಂದ ಮುಳುಗಡೆಯಾಗಿದ್ದು ಅಲ್ಲಿಂದ ಕೋಳಿ, ಸತ್ತ ಪ್ರಾಣಿಗಳ ಕಳೇಬರ ನೀರಿನಲ್ಲಿ ತೇಲಿ ಬರುತ್ತಿತ್ತು.

ಸಹಾಯ ತಂಡ ಪುನರ್ವಸತಿ ಕೇಂದ್ರಕ್ಕೆ ತಲುಪಿದಾಗ ಅಲ್ಲಿದ್ದ 400 ರೋಗಿಗಳು ಎರಡು ಮತ್ತು ಮೂರನೇ ಮಹಡಿಯಲ್ಲಿ ಆಶ್ರಯ ನೀಡಲಾಗಿತ್ತು. ನೆಲಮಾಳಿಗೆ ಸಂಪೂರ್ಣ ಜಲಾವೃತವಾಗಿತ್ತು.

ಸಹಾಯ ತಂಡ ಅಲ್ಲಿ ತಲುಪುವವರೆಗೆ ಬ್ಲಾಕ್ ಪಂಚಾಯತ್ ಸದಸ್ಯ ಥೋಮಸ್ ಮಾತ್ರ ಆ ಕೇಂದ್ರ ಮತ್ತು  ಹೊರಗಜಗತ್ತಿಗೆ ಇರುವ ಏಕೈಕ ಕೊಂಡಿಯಾಗಿದ್ದರು. ತಮ್ಮ ಸಣ್ಣ ಬೋಟ್ ಮೂಲಕ ಥೋಮಸ್ ಅವರೇ ಪುನರ್ವಸತಿ ಕೇಂದ್ರಕ್ಕೆ ಆಹಾರವನ್ನು ಪೂರೈಸುತ್ತಿದ್ದರು. ಪ್ರವಾಹದಿಂದ ಸಾವಿಗೀಡಾದ ಇಬ್ಬರು ರೋಗಿಗಳ ಮೃತದೇಹವನ್ನು ಥೋಮಸ್ ಅವರೇ ಹೊರಗೆ ತೆಗೆದುಕೊಂಡು ಹೋಗಿದ್ದರು ಎಂದು ಕೇರಳ ಆರೋಗ್ಯ ಇಲಾಖೆಯ ಸಾಮಾಜಿಕ ಸುರಕ್ಷಾ ವಿಭಾಗದ ವೈದ್ಯ ಡಾ. ಅನಿನ್ ಅನಿಯನ್. ಹೇಳಿದ್ದಾರೆ.

ಮಾನಸಿಕ ಅಸ್ವಸ್ಥರ ಕೇಂದ್ರದ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ. ಅಲ್ಲಿನ ರೋಗಿಗಳನ್ನು ಹೊರಗೆ ಕಳಿಸುವಂತಿಲ್ಲ. ನೀರಿನಲ್ಲಿ ಮುಳುಗಡೆಯಾಗಿ ರೋಗಿಗಳು ಸತ್ತಿಲ್ಲ. ಆದರೆ ಪ್ರವಾಹದ ವೇಳೆ ಅಗತ್ಯ ಔಷಧಿ ಸಿಗದೆ ಅವರು ಸಾವಿಗೀಡಾಗಿದ್ದಾರೆ.  ಮಧುಮೇಹಿಯಾದ ರೋಗಿಯೊಬ್ಬರು ಆಹಾರ ಮತ್ತು ಔಷಧಿ ಸಿಗದೆ ಸಾವಿಗೀಡಾಗಿದ್ದಾರೆ ಎಂದು ವೈದ್ಯಕೀಯ ಸಹಾಯ ತಂಡದಲ್ಲಿರುವ ವೈದ್ಯಕೀಯ ವಿದ್ಯಾರ್ಥಿ ಯು. ಆರ್. ರಾಹುಲ್ ಹೇಳಿದ್ದಾರೆ.

ಕಳೆದ 5 ದಿನಗಳಲ್ಲಿ ವೈದ್ಯಕೀಯ ಸಹಾಯ ತಂಡ ತ್ರಿಶ್ಶೂರ್ ಜಿಲ್ಲೆಯ ಕುಗ್ರಾಮಗಳಿಗೆ ತೆರಳಿ ಸಹಾಯ ಮಾಡಿದೆ.

ಕೇರಳದ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿ 

ಸಹಾಯ ಮಾಡಲಿಚ್ಛಿಸುವವರು ಕೇರಳ ಮುಖ್ಯಮಂತ್ರಿಯವರ ನೆರೆ ಪರಿಹಾರ ನಿಧಿಗೆ  ಹಣಕಳುಹಿಸಬಹುದು

Chief Minister's Distress Relief Fund
NO: 67319948232 
Bank: State Bank of India  
IFSC : SBIN0070028
SWIFT CODE : SBININBBT08

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !