ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಫೋನಿ' ಅವಾಂತರ | ಇನ್ನೂ ಸುಧಾರಿಸಲಿಲ್ಲ ಒಡಿಶಾ- ಕತ್ತಲಲ್ಲಿ ಐದು ಲಕ್ಷ ಮಂದಿ

Last Updated 4 ಜೂನ್ 2019, 2:01 IST
ಅಕ್ಷರ ಗಾತ್ರ

ಭುವನೇಶ್ವರ:ಒಡಿಶಾ ರಾಜ್ಯದ ಪುರಿ ಕಡಲತೀರಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿ ಒಂದು ತಿಂಗಳಾಯಿತು. ಚಂಡಮಾರುತದ ಹೊಡೆತಕ್ಕೆ ಹಾಳಾಗಿದ್ದ ವಿದ್ಯುತ್ ಪೂರೈಕೆ ವ್ಯವಸ್ಥೆ ಈವರೆಗೆ ಸರಿಯಾಗಿಲ್ಲ. ಹೀಗಾಗಿ ಒಡಿಶಾದ ಸುಮಾರು ಐದು ಲಕ್ಷ ಮಂದಿ ವಿದ್ಯುತ್ ಸಂಪರ್ಕ ಇಲ್ಲದೆ ಬಿರು ಬೇಸಿಗೆಯ ದಿನಗಳನ್ನು ಕಳೆಯುತ್ತಿದ್ದಾರೆ.

'ಫೋನಿ'ಯ ಅವಾಂತರದಿಂದ ಅತಿ ಹೆಚ್ಚು ನಷ್ಟ ಅನುಭವಿಸಿದ್ದು ಪುರಿ ಜಿಲ್ಲೆ. ಚಂಡಮಾರುತದ ಹೊಡೆತಕ್ಕೆ ಸುಮಾರು 3 ಲಕ್ಷ ಮನೆಗಳ ವಿದ್ಯುತ್ ಸಂಪರ್ಕ ಹಾಳಾಗಿತ್ತು. ಈವರೆಗೆ 1.50 ಲಕ್ಷ ಮನೆಗಳಿಗಷ್ಟೇ ವಿದ್ಯುತ್ ಸಂಪರ್ಕ ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗಿದೆ.

ಜಿಲ್ಲೆಯ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಮರು ಸ್ಥಾಪಿಸಲು ಈವರೆಗೆ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಒಡಿಶಾದ ಒಟ್ಟು 25 ಲಕ್ಷ ಮನೆಗಳು ಚಂಡಮಾರುತದ ನಂತರ ವಿದ್ಯುತ್ ಸಂಪರ್ಕ ಕಡಿದುಕೊಂಡಿದ್ದವು. ಸುಮಾರು 23 ಲಕ್ಷ ಮನೆಗಳಿಗೆ ಮತ್ತೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ.

ಒಡಿಶಾದಲ್ಲಿ ಫೋನಿ ಚಂಡಮಾರುತ ಅಪ್ಪಳಿಸಿದಾಗ ಛಿದ್ರ ಛಿದ್ರವಾಗಿರುವ ಮನೆಗಳು.
ಒಡಿಶಾದಲ್ಲಿ ಫೋನಿ ಚಂಡಮಾರುತ ಅಪ್ಪಳಿಸಿದಾಗ ಛಿದ್ರ ಛಿದ್ರವಾಗಿರುವ ಮನೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT