ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಏಮ್ಸ್‌ ಸ್ವಚ್ಛತಾ ಮೇಲ್ವಿಚಾರಕ ಸಾವು

Last Updated 25 ಮೇ 2020, 18:17 IST
ಅಕ್ಷರ ಗಾತ್ರ

ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್‌) ಸ್ವಚ್ಛತಾ ಮೇಲ್ವಿಚಾರಕ ಕೋವಿಡ್‌–19ರಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏಮ್ಸ್‌ನ ಕಾಯಂ ಉದ್ಯೋಗಿಯಾಗಿದ್ದ 58 ವರ್ಷದ ವ್ಯಕ್ತಿ ಭಾನುವಾರ ರಾತ್ರಿ 7.30ರ ಸುಮಾರಿಗೆ ಮೃತಪಟ್ಟಿದ್ದಾರೆ. ಅವರು ಏಮ್ಸ್‌ನ ಹೊರರೋಗಿಗಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.

‘ಸಾವನ್ನಪ್ಪಿದ ಸ್ವಚ್ಛತಾ ಮೇಲ್ವಿಚಾರಕ ಜ್ವರ ಮತ್ತು ಅಲ್ಪಪ್ರಮಾಣದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರಿಗೆ ಮೇ 16ರಂದು ಏಮ್ಸ್‌ನಲ್ಲೇ ಪರೀಕ್ಷಿಸಲಾಗಿತ್ತು. ಆದರೆ, ಆಗ ಅವರನ್ನು ಕೋವಿಡ್‌‌–19 ಪರೀಕ್ಷೆಗೊಳಪಡಿಸಿರಲಿಲ್ಲ. ರಕ್ತ ಪರೀಕ್ಷೆ ಮಾಡಿ, ಸಲಹೆ ನೀಡಿ ಅವರನ್ನು ಮನೆಗೆ ಕಳುಹಿಸಲಾಗಿತ್ತು’ ಎಂದು ಏಮ್ಸ್‌ನ ಎಸ್‌ಸಿ/ಎಸ್‌ಟಿ ನೌಕರರ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿ ಕುಲದೀಪ್ ಧಿಗನ್ ಆರೋಪಿಸಿದ್ದಾರೆ.

‘ಅವರ ಪರಿಸ್ಥಿತಿ ಹಠಾತ್ತನೆ ಬಿಗಡಾಯಿಸಿದ್ದರಿಂದ ಮೇ 19ರಂದು ತುರ್ತುಚಿಕಿತ್ಸೆ ನೀಡಲಾಯಿತು. ಉಸಿರಾಡಲು ಕಷ್ಟಪಡುತ್ತಿದ್ದ ಅವರಿಗೆ ಕೋವಿಡ್‌–19 ಇರುವುದು ಪರೀಕ್ಷೆಯಿಂದ ದೃಢಪಟ್ಟಿತ್ತು. ಆಗ ಅವರನ್ನು ಕೋವಿಡ್ ವಾರ್ಡ್‌ಗೆ ದಾಖಲಿಸಲಾಯಿತು’ ಎಂದು ಅವರು ತಿಳಿಸಿದ್ದಾರೆ.

‘ಕೊರೊನಾ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ಅಪಾಯಕಾರಿ ಬಯೊಮೆಡಿಕಲ್ ತ್ಯಾಜ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಇಂಥ ಕಾರ್ಮಿಕರು ಸಣ್ಣಮಟ್ಟದಲ್ಲಿ ಅಸ್ವಸ್ಥರಾದರೂ ಅವರನ್ನು ಪರೀಕ್ಷೆಗೊಳಪಡಿಸುವ ಅಗತ್ಯವಿದೆ. ಆರೋಗ್ಯ ಕಾರ್ಯಕರ್ತರ ಸುರಕ್ಷತೆಗೆ ಸಂಬಂಧಿಸಿದಂತೆ ಏಮ್ಸ್ ನಿರ್ದೇಶಕರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದೇವೆ’ಎಂದು ಅವರು ಹೇಳಿದ್ದಾರೆ.

ಎಮ್ಸ್‌ನ ಆರ್‌ಪಿಸಿ ಕ್ಯಾಂಟೀನ್ ಉದ್ಯೋಗಿಯೊಬ್ಬರು ಕಳೆದ ವಾರ ಕೋವಿಡ್‌–19ನಿಂದ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT