ಖರೋಲಾ ವಿಮಾನಯಾನ ಕಾರ್ಯದರ್ಶಿ

7

ಖರೋಲಾ ವಿಮಾನಯಾನ ಕಾರ್ಯದರ್ಶಿ

Published:
Updated:
Prajavani

ನವದೆಹಲಿ: ಏರ್‌ ಇಂಡಿಯಾದ ಮುಖ್ಯಸ್ಥ ಪ್ರದೀಪ್‌ ಸಿಂಗ್ ಖರೋಲಾ ಅವರನ್ನು ನಾಗರಿಕ ವಿಮಾನಯಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಜನವರಿ 31ರಂದು ರಾಜೀವ್‌ ನಯನ್‌ ಚೌಬೆ ಅವರ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನಕ್ಕೆ ಈ ನೇಮಕ ನಡೆದಿದೆ.

ಕರ್ನಾಟಕ ಕೇಡರ್‌ನ 1985ರ ಐಎಎಸ್‌ ಅಧಿಕಾರಿಯಾಗಿರುವ ಖರೋಲಾ ಅವರನ್ನು 2017ರ ನವೆಂಬರ್‌ನಲ್ಲಿ ಏರ್‌ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಚೌಬೆ ಅವರನ್ನು ಯುಪಿಎಸ್‌ಸಿ ಸದಸ್ಯರನ್ನಾಗಿ ನೇಮಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !