ಶನಿವಾರ, ಫೆಬ್ರವರಿ 27, 2021
31 °C

ಶಾರ್ಜಾದಿಂದ 200 ಭಾರತೀಯರ ಕರೆತರಲಿದೆ ಏರ್ ಇಂಡಿಯಾ ವಿಮಾನ

ಪಿಟಿಐ Updated:

ಅಕ್ಷರ ಗಾತ್ರ : | |

Air India

ಲಖನೌ: ಏರ್ ಇಂಡಿಯಾ ವಿಮಾನದ ಮೂಲಕ ಶಾರ್ಜಾದಿಂದ ಸುಮಾರು 200 ಭಾರತೀಯರು ಶನಿವಾರ ಲಖನೌಗೆ ಬರಲಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘200 ಪ್ರಯಾಣಿಕರನ್ನೊಳಗೊಂಡ ಏರ್‌‌ ಇಂಡಿಯಾ ವಿಮಾನವು ಶನಿವಾರ ರಾತ್ರಿ 8ರಿಂದ 8.30ರ ನಡುವೆ ಶಾರ್ಜಾದಿಂದ ಲಖನೌಗೆ ಬರುವ ನಿರೀಕ್ಷೆ ಇದೆ’ ಎಂದು ‘ಚೌಧರಿ ಚರಣ್ ಸಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ದ ನಿರ್ದೇಶಕ ಎ.ಕೆ. ಶರ್ಮಾ ಶುಕ್ರವಾರ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 

ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಮೇ 7ರಿಂದ ಹಂತಹಂತವಾಗಿ ವಾಪಸ್ ಕರೆಸಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಸೋಮವಾರ ಹೇಳಿತ್ತು. ಲಾಕ್‌ಡೌನ್‌ನಿಂದಾಗಿ ವಿದೇಶದಲ್ಲಿ ಸಿಲುಕಿರುವ ಸುಮಾರು 15 ಸಾವಿರ ಭಾರತೀಯ ಪ್ರಜೆಗಳನ್ನು ಮರಳಿ ತಾಯ್ನಾಡಿಗೆ ಕರೆತರಲು ಮೇ 7ರಿಂದ 13ರವರೆಗೆ ಏರ್‌ ಇಂಡಿಯಾದ 64 ವಿಮಾನಗಳು ಕಾರ್ಯನಿರ್ವಹಿಸಲಿವೆ ಎಂದೂ ಸರ್ಕಾರ ಹೇಳಿತ್ತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು