ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಸ್‌ ಕದ್ದ ಏರ್‌ ಇಂಡಿಯಾ ಅಧಿಕಾರಿ ರಾಜೀನಾಮೆ

Last Updated 28 ಆಗಸ್ಟ್ 2019, 16:54 IST
ಅಕ್ಷರ ಗಾತ್ರ

ನವದೆಹಲಿ: ಸಿಡ್ನಿ ವಿಮಾನ ನಿಲ್ದಾಣದಲ್ಲಿ ಮಳಿಗೆಯೊಂದರಿಂದ ಪರ್ಸ್‌ ಕದ್ದಏರ್‌ ಇಂಡಿಯಾ(ಏಐ)ಪೂರ್ವ ವಲಯದ ಪ್ರಾದೇಶಿಕ ನಿರ್ದೇಶಕ ರೋಹಿತ್‌ ಭಾಸಿನ್‌,ಕಡ್ಡಾಯವಾಗಿ ರಾಜೀನಾಮೆ ನೀಡಬೇಕು ಎಂದುಏರ್‌ ಇಂಡಿಯಾ ಸೂಚಿಸಿದೆ.

ಜೂನ್‌ 22ರಂದುಸಿಡ್ನಿ ವಿಮಾನ ನಿಲ್ದಾಣದಲ್ಲಿ ರೋಹಿತ್‌ ಪರ್ಸ್‌ ಕದ್ದಿರುವುದು ತನಿಖೆಯಿಂದ ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಸಂಸ್ಥೆ ಈ ಸೂಚನೆ ನೀಡಿದೆ. ಸ್ವಯಂ ನಿವೃತ್ತಿ (ವಿಆರ್‌ಎಸ್‌) ಪಡೆಯುವ ರೋಹಿತ್‌ ಮನವಿಯನ್ನು ಸಂಸ್ಥೆ ತಿರಸ್ಕರಿಸಿದೆ. ‘ರೋಹಿತ್‌ ವಿರುದ್ಧ ಮತ್ತಷ್ಟು ದೂರುಗಳಿದ್ದು, 2016 ಏಪ್ರಿಲ್‌ನಲ್ಲಿ ದೆಹಲಿ–ಪ್ಯಾರಿಸ್‌ ನಡುವಿನ ಏಐ ಬಿ787 ಡ್ರೀಮ್‌ಲೈನರ್‌ವಿಮಾನವನ್ನು ನಿಗದಿತ ಎತ್ತರಕ್ಕಿಂತ ಅಧಿಕ ಎತ್ತರದಲ್ಲಿ ಹಾರಿಸಿದ್ದರು. ಈ ಮೂಲಕ ಪ್ರಯಾಣಿಕರ ಜೀವದ ಜತೆ ಚೆಲ್ಲಾಟವಾಡಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಏರ್‌ ಇಂಡಿಯಾದಲ್ಲಿ ಆಗಸ್ಟ್ 31ರವರೆಗೆ ರೋಹಿತ್‌ ಕಾರ್ಯನಿರ್ವಹಿಸಲಿದ್ದಾರೆ.ಸಿಡ್ನಿ ಘಟನೆ ಬಳಿಕ ಅಮಾನತುಗೊಂಡಿದ್ದ ರೋಹಿತ್‌ ಅವರಿಗೆ ಏರ್‌ ಇಂಡಿಯಾ ಸಂಸ್ಥೆ ಮತ್ತು ವಿಮಾನದೊಳಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT