ಭಾನುವಾರ, ಸೆಪ್ಟೆಂಬರ್ 22, 2019
23 °C

ಲೈಂಗಿಕ ಕಿರುಕುಳ ಮಹಿಳಾ ಪೈಲಟ್‌ ಆರೋಪ

Published:
Updated:

ನವದೆಹಲಿ: ಮಹಿಳಾ ಪೈಲಟ್‌ ಒಬ್ಬರು ಕಮಾಂಡರ್ ವಿರುದ್ಧ ಲೈಂಗಿಕ ಕಿರುಕುಳ ದೂರು ಸಲ್ಲಿಸಿದ್ದು, ತನಿಖೆಗೆ ಉನ್ನತ ಮಟ್ಟದ ಆಂತರಿಕ ಸಮಿತಿ ರಚಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ. 

ಪೈಲಟ್ ನೀಡಿರುವ ದೂರಿನ ಪ್ರಕಾರ ಈ ಘಟನೆ ಮೇ 5ರಂದು ಹೈದರಾಬಾದ್‌ನಲ್ಲಿ ನಡೆದಿದೆ. 

‘ತರಬೇತಿ ನೀಡುತ್ತಿದ್ದ ಕಮಾಂಡರ್, ಅಂದಿನ ತರಬೇತಿ ಬಳಿಕ ನಾವು ರೆಸ್ಟೊರೆಂಟ್‌ಗೆ ಹೋಗೋಣ ಎಂದರು. ರೆಸ್ಟೊರೆಂಟ್‌ಗೆ ತೆರಳಿದ ಬಳಿಕ, ತಮ್ಮ ವೈವಾಹಿಕ ಜೀವನದಲ್ಲಿ ಜಿಗುಪ್ಸೆ ಇದೆ ಎಂದು ಹೇಳಲಾರಂಭಿಸಿದರು. ಬಳಿಕ ನೀವು ಪತಿಯಿಂದ ದೂರವಿದ್ದು ಹೇಗೆ ಜೀವನ ಮಾಡುತ್ತಿದ್ದೀರಿ ಎಂದು ಕೇಳಿದರು. ಲೈಂಗಿಕ ಜೀವನದ ಕುರಿತು ಪ್ರಶ್ನಿಸಿದರು. ಅವರ ವರ್ತನೆ ಮುಜುಗರ ತಂದಿತು’ ಎಂದು ದೂರಿನಲ್ಲಿ ಮಹಿಳಾ ಪೈಲಟ್ ಉಲ್ಲೇಖಿಸಿದ್ದಾರೆ. 

‘ಈ ಕುರಿತು ನನಗೆ ಮಾತನಾಡಲು ಇಷ್ಟವಿಲ್ಲ ಎಂದು ಅವರಿಗೆ ಹೇಳಿ ಕ್ಯಾಬ್‌ನಲ್ಲಿ ತೆರಳಲು ಮುಂದಾದೆ. ಕ್ಯಾಬ್‌ಗೆ ಅರ್ಧಗಂಟೆ ಕಾಯುವಷ್ಟರಲ್ಲಿ ಅವರ ವರ್ತನೆ ಮತ್ತಷ್ಟು ಕೀಳಾಗಿತ್ತು. ಈ ವಿಷಯವನ್ನು ವಿಮಾನಯಾನ ಸಂಸ್ಥೆಗೆ ತಿಳಿಸುವುದು ಉತ್ತಮ ಎನಿಸಿತು. ಏಕೆಂದರೆ ಭವಿಷ್ಯದಲ್ಲಿ ಇಂತಹ ಅನುಭವ ಯಾರಿಗೂ ಆಗಬಾರದು’ ಎಂದು ಅವರು ಹೇಳಿದ್ದಾರೆ. 

Post Comments (+)