ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಸ್ ಕಳವು: ಏರ್‌ ಇಂಡಿಯಾ ಹಿರಿಯ ಪೈಲಟ್ ಅಮಾನತು

Last Updated 23 ಜೂನ್ 2019, 19:38 IST
ಅಕ್ಷರ ಗಾತ್ರ

ನವದೆಹಲಿ: ಸಿಡ್ನಿ ವಿಮಾನ ನಿಲ್ದಾಣದ ‘ಡ್ಯುಟಿ ಫ್ರೀ ಶಾಪ್‌’ನಲ್ಲಿ ಪರ್ಸ್ ಕಳವು ಮಾಡಿದ್ದ ಏರ್‌ ಇಂಡಿಯಾದ ಪ್ರಾದೇಶಿಕ ನಿರ್ದೇಶಕ (ಪೂರ್ವ) ರೋಹಿತ್‌ ಭಾಸಿನ್‌ ಅವರನ್ನು ಅಮಾನತುಗೊಳಿಸಲಾಗಿದೆ.

ಜೂನ್‌ 22ರಂದು ಸಿಡ್ನಿಯಿಂದ ದೆಹಲಿಗೆ ಬರಬೇಕಿದ್ದ ವಿಮಾನದಲ್ಲಿ ಕಮಾಂಡರ್‌ (ಪೈಲಟ್‌) ಆಗಿಯೂ ಇವರನ್ನು ನಿಯೋಜನೆ ಮಾಡಲಾಗಿತ್ತು. ಕಮಾಂಡರ್‌ನ ಈ ಕೃತ್ಯದ ಕುರಿತು ಆಸ್ಟ್ರೇಲಿಯಾದ ಪ್ರಾದೇಶಿಕ ವ್ಯವಸ್ಥಾಪಕರು ದೂರು ನೀಡಿದ್ದರು.

ಈ ವಿಷಯ ತಿಳಿಯುತ್ತಿದ್ದಂತೆ ಏರ್‌ ಇಂಡಿಯಾ ರೋಹಿತ್‌ ಭಾಸಿನ್‌ ಅನ್ನು ಅಮಾನತುಗೊಳಿಸಿ, ವಿಚಾರಣೆಗೆ ಆದೇಶಿಸಿದೆ ಎಂದು ವಿಮಾನಯಾನ ಸಂಸ್ಥೆ ವಕ್ತಾರರು ಭಾನುವಾರ ತಿಳಿಸಿದ್ದಾರೆ. ‘ಏರ್ ಇಂಡಿಯಾದ ಸಿಬ್ಬಂದಿ ನಡವಳಿಕೆ ಸರಿಯಾಗಿರಬೇಕು ಎಂದು ಬಯಸುತ್ತದೆ ಎಂದು ವಕ್ತಾರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT