ಶುಕ್ರವಾರ, ಡಿಸೆಂಬರ್ 13, 2019
20 °C

ವಿಮಾನ ತುರ್ತು ಭೂಸ್ಪರ್ಶ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಕೋಲ್ಕತ್ತ: ಹಾರಾಟ ಸಮಯದಲ್ಲಿ ಹೊಗೆ ಕಾಣಿಸಿಕೊಂಡ ಕಾರಣ ಜೈಪುರ–ಕೋಲ್ಕತ್ತ ಮಾರ್ಗದ ಇಂಡಿಗೊ ವಿಮಾನವು ಕೋಲ್ಕತ್ತದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಸೋಮವಾರ ನಡೆದಿದೆ. ವಿಮಾನದಲ್ಲಿದ್ದ 136 ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ ಎಂದು ಡಿಜಿಸಿಎ ಅಧಿಕಾರಿ ತಿಳಿಸಿದ್ದಾರೆ.

ಕೋಲ್ಕತ್ತದಿಂದ ಸುಮಾರು 45 ಮೈಲು ದೂರದಲ್ಲಿದ್ದಾಗ ವಿಮಾನದ ಪೈಲಟ್ ಸಹಾಯಕ್ಕಾಗಿ ತುರ್ತು ಸಂದೇಶ ಕಳಹಿಸಿದ ಕಾರಣ ಕೋಲ್ಕತ್ತದಲ್ಲಿ ವಿಮಾನ ಇಳಿಸಲು ಅವಕಾಶ ನೀಡಲಾಯಿತು. ಪ್ರಕರಣದ ತನಿಖೆಗೆ ಸರ್ಕಾರ ಆದೇಶ ನೀಡಿದೆ.

ವಿಮಾನದದಲ್ಲಿ ಈ ಮೊದಲು ಯಾವುದೇ ತಾಂತ್ರಿಕ ತೊಂದರೆ ಕಾಣಿಸಿಕೊಂಡಿರಲಿಲ್ಲ. ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡ ಶಂಕೆ ಮೇಲೆ ಮುಂಜಾಗರೂಕತೆ ಕ್ರಮವಾಗಿ ಭೂಸ್ಪರ್ಶ ಮಾಡಿಸಲಾಯಿತು ಎಂದು ಡಿಜಿಸಿಎ ತಿಳಿಸಿದೆ. 

ಕಡಿಮೆ ವೆಚ್ಚದ ವಿಮಾನಯಾನ ಸೇವೆ ಒದಗಿಸುತ್ತಿರುವ ಇಂಡಿಗೊ ಹಾಗೂ ಗೋ ಏರ್ ಸಂಸ್ಥೆಗಳ ವಿಮಾನಗಳಲ್ಲಿ ಪ್ರಾಟ್ ಅಂಡ್ ವಿಟ್ನಿ ಎಂಜಿನ್ ಬಳಸಲಾಗುತ್ತಿದೆ. ಬಳಕೆ ಶುರುವಾದಾಗಿನಿಂದಲೂ ಹಾರಾಟದ ಸಮಯದಲ್ಲಿ ಈ ಎಂಜಿನ್‌ಗಳು ಗಂಭೀರ ತೊಡಕು ಉಂಟು ಮಾಡುತ್ತಿವೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು