ಭಾರತದ ಮೇಲೆ ದಾಳಿ ಮಾಡಿದ ಪಾಕ್ ಈಗ ಆರೋಪಿ: ಡೊಭಾಲ್–ಜಾನ್ ಮಹತ್ವದ ಮಾತುಕತೆ

ಮಂಗಳವಾರ, ಮಾರ್ಚ್ 26, 2019
33 °C

ಭಾರತದ ಮೇಲೆ ದಾಳಿ ಮಾಡಿದ ಪಾಕ್ ಈಗ ಆರೋಪಿ: ಡೊಭಾಲ್–ಜಾನ್ ಮಹತ್ವದ ಮಾತುಕತೆ

Published:
Updated:

ನವದೆಹಲಿ: ‘ಭಾರತದ ವಿರುದ್ಧ ದಾಳಿ ನಡೆಸಲು ಪಾಕಿಸ್ತಾನವು ಎಫ್-16 ಯುದ್ಧವಿಮಾನ ಬಳಸಿತ್ತು’ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊಭಾಲ್ ಅಮೆರಿಕದ ಭದ್ರತಾ ಸಲಹೆಗಾರ ಜಾನ್ ಬೋಲ್ಟಾನ್ ಗಮನಕ್ಕೆ ತಂದಿದ್ದಾರೆ. ಮಂಗಳವಾರ ಬೋಲ್ಟಾನ್ ಜೊತೆಗೆ ಮಾತನಾಡಿದ ದೊಭಾಲ್ ಈ ಕುರಿತು ಭಾರತದ ಬಳಿ ಸಾಕ್ಷ್ಯಗಳಿವೆ ಎಂದು ಮನವರಿಕೆ ಮಾಡಿಕೊಟ್ಟರು.

ಜೈಷ್-ಎ-ಮೊಹಮದ್‌ನ ಉಗ್ರ ಮಸೂಜ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಹೊಸ ಪ್ರಸ್ತಾವ ಇದೀಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎದುರು ಇದೆ. ಈ ಹಿನ್ನೆಲೆಯಲ್ಲಿ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ. ಭೇಟಿಯ ವೇಳೆ ಈ ಅಂಶವೂ ಪ್ರಧಾನವಾಗಿ ಚರ್ಚೆಗೆ ಬಂತು ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ಪುಲ್ವಾಮಾ ದಾಳಿಯ ನಂತರ ಬಿಗಡಾಯಿಸಿದ ಭಾರತ-ಪಾಕ್ ಸಂಬಂಧ, ಪ್ರತೀಕಾರವಾಗಿ ಭಾರತೀಯ ವಾಯುಪಡೆ ನಡೆಸಿದ ದಾಳಿ, ಪಾಕಿಸ್ತಾನದ ಯುದ್ಧೋತ್ಸಾಹದ ಬಗ್ಗೆಯೂ ಡೊಭಾಲ್ ವಿವರಿಸಿದರು ಎನ್ನಲಾಗಿದೆ. ಇಬ್ಬರ ಮಾತುಕತೆಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನವು ಎಫ್-16 ಬಳಸಿದ ಕುರಿತು ಡೊಭಾಲ್ ಸಾಕಷ್ಟು ವಿವರಗಳನ್ನು ನೀಡಿದರು.

ಭಾರತದ ವಿರುದ್ಧ ಎಫ್-16 ಯುದ್ಧವಿಮಾನಗಳನ್ನು ಬಳಕೆ ಮಾಡಿಲ್ಲ ಎಂದೇ ಪಾಕಿಸ್ತಾನವು ಹೇಳುತ್ತಿದೆ. ಆದರೆ ಭಾರತದ ಗಡಿಯಲ್ಲಿ ಪಾಕ್ ವಾಯುಪಡೆ ಪ್ರಯೋಗಿಸಿದ ಕ್ಷಿಪಣಿಯ ಅವಶೇಷಗಳನ್ನು ಸಂಗ್ರಹಿಸಿರುವ ಭಾರತೀಯ ಸೇನೆ ಎಫ್-16 ಯುದ್ಧ ವಿಮಾನ ಬಳಕೆ ಮಾಡಿರುವುದಕ್ಕೆ ಇದು ಸಾಕ್ಷ್ಯ ಎಂದು ಹೇಳುತ್ತಿದೆ. ಎಫ್–16 ಯುದ್ಧವಿಮಾನಗಳನ್ನು ಭಾರತದ ವಿರುದ್ಧ ಬಳಸಿರುವ ಪಾಕ್ ಕ್ರಮ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ.

ಬರಹ ಇಷ್ಟವಾಯಿತೆ?

 • 63

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !