ಪ್ರಿಯಾ ರಮಣಿ ಆರೋಪ ಸತ್ಯಕ್ಕೆ ದೂರ: ಎಂ.ಜೆ.ಅಕ್ಬರ್‌

ಗುರುವಾರ , ಜೂನ್ 20, 2019
24 °C

ಪ್ರಿಯಾ ರಮಣಿ ಆರೋಪ ಸತ್ಯಕ್ಕೆ ದೂರ: ಎಂ.ಜೆ.ಅಕ್ಬರ್‌

Published:
Updated:
Prajavani

ನವದೆಹಲಿ: ಪತ್ರಕರ್ತೆ ಪ್ರಿಯಾ ರಮಣಿಯನ್ನು ಹೋಟೆಲ್‌ನಲ್ಲಿ ಸಂದರ್ಶನಕ್ಕಾಗಿ ಭೇಟಿ ಮಾಡಿರುವ ಆರೋಪವನ್ನು ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್‌ ತಿರಸ್ಕರಿಸಿದ್ದಾರೆ. 

1994ರಲ್ಲಿ ಎಂ.ಜೆ. ಅಕ್ಬರ್‌ ಪತ್ರಿಕೆ ಸಂಪಾದಕರಾಗಿದ್ದ ಸಂದರ್ಭದಲ್ಲಿ ಸಂದರ್ಶನ ನಡೆಸುವ ನೆಪದಲ್ಲಿ ಹೋಟೆಲ್‌ ಕೊಠಡಿಗೆ ಕರೆದು ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಪ್ರಿಯಾ ರಮಣಿ ಆರೋಪಿಸಿದ್ದರು. 

‘ನಾನು ಪ್ರಿಯಾ ರಮಣಿ ಅವರನ್ನು ಹೋಟೆಲ್‌ಗೆ ಕೊಠಡಿಗೆ ಕರೆದಿದ್ದೆ. ಆದರೆ, ಆಕೆ ಹಿಂಜರಿದಳು ಎಂಬುದೆಲ್ಲ ಸುಳ್ಳು.  ಪದವಿ ಬಳಿಕ ಅದು ಆಕೆಯ ಮೊದಲ ಸಂದರ್ಶನವಾಗಿತ್ತು ಎಂಬುದರ ಬಗ್ಗೆಯೂ ನನಗೆ ತಿಳಿದಿಲ್ಲ’ ಎಂದಿದ್ದಾರೆ. 

‘ಈ ಅವಧಿಯಲ್ಲಿ ಪ್ರಿಯಾ ರಮಣಿಗೆ ಏಷಿಯನ್‌ ಏಜ್‌ ಪತ್ರಿಕೆಯ ದೆಹಲಿಯ ಕಚೇರಿಯಲ್ಲಿ ಉದ್ಯೋಗ ನೀಡಲಾಯಿತು ಎಂಬುದರ ಬಗ್ಗೆ ನನಗೆ ಖಾತ್ರಿಯಿಲ್ಲ. ನನ್ನ ತಿಳಿವಳಿಕೆ ಪ್ರಕಾರ ಮುಂಬೈ ಕಚೇರಿಯಲ್ಲಿ ಕೆಲಸದಲ್ಲಿದ್ದರು’ ಎಂದಿದ್ದಾರೆ. 

ಇದೇ ವೇಳೆ, ಇತರ ಪತ್ರಕರ್ತೆಯರು ಅಕ್ಬರ್‌ ವಿರುದ್ಧ ಮಾಡಿದ ಆರೋಪದ ಕುರಿತು ಪಾಟಿ ಸವಾಲು ನಡೆಸಲಾಯಿತು. 

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !