ನವದೆಹಲಿ:ರಾಷ್ಟ್ರಪತಿ ಭವನದ ಆವರಣದಲ್ಲಿ ಮಂಗಗಳ ಗುಂಪೊಂದು ಕಚ್ಚಾಟ ನಡೆಸಿದ್ದು, ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಮಂಗವೊಂದನ್ನು ಸಿಬ್ಬಂದಿ ರಕ್ಷಿಸಿದ್ದಾರೆ.
ಭವನದ ತಾರಸಿಯಲ್ಲಿ ಮಂಗಗಳ ಕಿರುಚಾಟ ಜೋರಾದಾಗ ಸಿಬ್ಬಂದಿ ಅಲ್ಲಿಗೆ ತೆರಳಿ ಅವುಗಳನ್ನು ಓಡಿಸಿದರು. ಆದರೆ ಮಂಗವೊಂದು ಗಾಯಗೊಂಡು ಬಿದ್ದಿತ್ತು. ಇದನ್ನು ಗಮನಿಸಿದ ಸಿಬ್ಬಂದಿಯೊಬ್ಬರು, ತಕ್ಷಣವೇ ವನ್ಯಜೀವಿ ಸಂರಕ್ಷಣಾ ಸ್ವಯಂ ಸೇವಾ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ಈ ಮಂಗ ನೀರಿನ ಟ್ಯಾಂಕ್ ಕೆಳಗೆ ಪತ್ತೆಯಾಗಿತ್ತು. ಎನ್‌ಜಿಒ ಸದಸ್ಯರು ಬರುವವರಿಗೂ ಸಿಬ್ಬಂದಿಯೇ ಅದರ ರಕ್ಷಣೆ ಮಾಡಿದ್ದಾರೆ.
‘ಮಂಗಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಅದು ಚೇತರಿಸಿಕೊಂಡ ನಂತರ ಕಾಡಿಗೆ ಬಿಡಲಾಗುವುದು’ ಎಂದು ಸ್ವಯಂ ಸೇವಾ ಸಂಸ್ಥೆ ವಿಶೇಷ ಯೋಜನೆಗಳ ಉಪನಿರ್ದೇಶಕ ವಾಸಿಂ ಅಕ್ರಂ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.