ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮ್ರಾನ್‌ ಖಾನ್‌ ಕುಟುಂಬದ ನಂಟಿನ ಸ್ವಾರಸ್ಯಕರ ಸಂಗತಿ ಬಿಚ್ಚಿಟ್ಟ ಅಮರಿಂದರ್ ಸಿಂಗ್

Last Updated 11 ನವೆಂಬರ್ 2019, 9:37 IST
ಅಕ್ಷರ ಗಾತ್ರ

ಚಂಡಿಗಡ: ಐತಿಹಾಸಿಕ ಕರ್ತಾರ್ಪುರ್ ಸಾಹಿಬ್ ಗುರುದ್ವಾರಕ್ಕೆ ಪ್ರಾರ್ಥನೆಗೆ ಹೋಗುವಾಗ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು, ಪಾಕ್ ಪ್ರಧಾನಿ ಇಮ್ರಾನ್ಖಾನ್ ಜತೆ ಐದು ನಿಮಿಷ ಬಸ್ ಪ್ರಯಾಣ ಮಾಡಿದ್ದು, 1934-35ರಲ್ಲಿ ತಮ್ಮ ತಂದೆಯ ನಾಯಕತ್ವದಲ್ಲಿ ಖಾನ್‌ನ ಚಿಕ್ಕಪ್ಪ ಪಟಿಯಾಲ ತಂಡದಲ್ಲಿ ಕ್ರಿಕೆಟ್ ಆಡಿದ್ದನ್ನು ಸ್ಮರಿಸಿಕೊಂಡಿದ್ದಾರೆ.

ಗುರುದ್ವಾರದ ಮೊದಲ ಯಾತ್ರೆಯ ಭಾಗವಾಗಿಸಿಂಗ್, ಪಾಕ್ ಪ್ರಧಾನಿ ಮತ್ತುವಿದೇಶಾಂಗ ಸಚಿವರು ಕರ್ತಾರ್‌ಪುರದ ಅಂತರರಾಷ್ಟ್ರೀಯಗಡಿಯಲ್ಲಿ ಸ್ವಾಗತಿಸಿದ ನಂತರ ಪಾಕ್ ಐದು ನಿಮಿಷ ಖಾನ್‌ ಅವರೊಂದಿಗೆ ಬಸ್ ಪ್ರಯಾಣ ಮಾಡಿದರು.

ಈ ಕುರಿತು ಪಂಜಾಬ್ ಮುಖ್ಯಮಂತ್ರಿಗಳ ಕಚೇರಿಯು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಕಡಿಮೆ ಅವಧಿಯ ಪ್ರಯಾಣದಲ್ಲಿಆಸಕ್ತಿದಾಯಕವಾಗಿರುವ ವಿಚಾರಕುರಿತು ಇಬ್ಬರು ಮಾತನಾಡಿದ್ದಾರೆ. ಕ್ರಿಕೆಟ್ ಎನ್ನುವುದು ಪ್ರತಿ ಭಾರತೀಯರ ಮತ್ತು ಪಾಕಿಸ್ತಾನನಡುವಿನಸಾಮಾನ್ಯ ವಿಚಾರ. ಅಲ್ಲದೆ ಎರಡು ಕಡೆಗಳಲ್ಲಿನ ಬಾಂಧವ್ಯಮತ್ತು ಭಾವನೆಗಳನ್ನು ಗರಿಗೆದರಿಸುವ ವಿಚಾರವಾಗಿದೆ ಎಂದು ಹೇಳಿದೆ.

ಈ ಮೊದಲು ಸಿಂಗ್ ಮತ್ತು ಖಾನ್ ಒಬ್ಬರನ್ನೊಬ್ಬರು ಭೇಟಿಯಾಗದೆ ವೈಯಕ್ತಿಕವಾಗಿ ಏನನ್ನು ತಿಳಿದಿರಲಿಲ್ಲ. ಆ ಬಸ್ ಪ್ರಯಾಣ ಇಮ್ರಾನ್ ಖಾನ್ ಕುಟುಂಬ ತಮ್ಮ ಕುಟುಂಬದೊಂದಿಗೆ ವಿಶೇಷ ಬಾಂಧವ್ಯಹೊಂದಿತ್ತು ಎಂಬುದನ್ನುಸಿಂಗ್ ನೆನಪಿಸಿದ್ದಾರೆ. ಖಾನ್ ಕ್ರಿಕೆಟ್ ಆಡುತ್ತಿದ್ದ ಕಾಲದಲ್ಲಿ ಅವರ ಆಟವನ್ನು ನೋಡಿರುವುದಾಗಿ ತಿಳಿಸಿದ್ದಾರೆ.

ಖಾನ್‌ರ ಚಿಕ್ಕಪ್ಪ ಜಹಾಂಗೀರ್ ಖಾನ್ ಅವರು ಪಟಿಯಾಲ ತಂಡದಲ್ಲಿ ಮೊಹ್ದ್ ನಿಸಾರ್, ಲಾಲಾ ಅಮರ್‌ನಾಥ್, ವೇಗಿ ಅಮರ್ ಸಿಂಗ್ ಮತ್ತು ಬ್ಯಾಟ್ಸ್‌ಮನ್‌ಗಳಾದ ವಾಜಿರ್ ಅಲಿ ಮತ್ತು ಅಮಿರ್ ಅಲಿ ಅವರೊಂದಿಗೆ ಆಟವಾಡಿದ್ದಾರೆ. ಈ ಏಳು ಆಟಗಾರರು ಪಟಿಯಾಲ ರಾಜ್ಯವನ್ನಾಳುತ್ತಿದ್ದ ಸಿಂಗ್ ತಂದೆ ಮಹಾರಾಜ ಯದ್ವಿಂದರ್ ಸಿಂಗ್ ಅವರ ನಾಯಕತ್ವದ ತಂಡದಲ್ಲಿದ್ದರು ಎಂದು ಹೇಳಿದಾಗ ಇಮ್ರಾನ್ ಖಾನ್ ಈ ವಿಚಾರಗಳನ್ನು ಆಸ್ವಾದಿಸಿದರು.

ಅಮರಿಂದರ್ ಸಿಂಗ್ ಅವರು ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಅವರೊಂದಿಗೆ ಪಾಕ್ ಪ್ರಧಾನಿ ಜತೆ ಪ್ರಯಾಣಿಸಿದ್ದಾರೆ. ಬಸ್‌ನಲ್ಲಿ ಪಾಕ್ ವಿದೇಶಾಂಗ ಸಚಿವರು ಕೂಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT