ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರನಾಥ: 3.15 ಲಕ್ಷ ಯಾತ್ರಿಕರ ಭೇಟಿ

Last Updated 27 ಜುಲೈ 2019, 19:37 IST
ಅಕ್ಷರ ಗಾತ್ರ

ಶ್ರೀನಗರ: ಅಮರನಾಥ ಯಾತ್ರೆ ಆರಂಭವಾದ ಮೊದಲ 26 ದಿನಗಳಲ್ಲಿ 3.15 ಲಕ್ಷ ಮಂದಿ ತಮ್ಮ ಯಾತ್ರೆ ಪೂರ್ಣ ಗೊಳಿಸಿದ್ದು, ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚು ಭಕ್ತರು ಈ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

3,880 ಮೀಟರ್‌ ಎತ್ತರದ ಗುಹೆಯಲ್ಲಿ ನೈಸರ್ಗಿಕವಾಗಿ ರೂಪು ಗೊಂಡ ಶಿವಲಿಂಗದ ದರ್ಶನವನ್ನು 3,14,584 ಭಕ್ತರು ಜುಲೈ 1ರಿಂದ 26ರ ಅವಧಿಯಲ್ಲಿ ‌ಪಡೆದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

2015ರಲ್ಲಿ 59 ದಿನಗಳ ಅಮರನಾಥ ಯಾತ್ರೆಗೆ ಹೋಲಿಸಿದರೆ ಈ ವರ್ಷ ದರ್ಶನ ಪಡೆದ ಭಕ್ತರ ಸಂಖ್ಯೆ ಹೆಚ್ಚಾಗಿದೆ. 59 ದಿನಗಳಲ್ಲಿ ದರ್ಶನ ಪಡೆದ ಭಕ್ತರ ಸಂಖ್ಯೆ 3.52 ಲಕ್ಷ.

2001ರಲ್ಲಿ ಶ್ರೀ ಅಮರನಾಥ ದೇಗುಲ ಮಂಡಳಿಯು ಯಾತ್ರೆಯ ಉಸ್ತುವಾರಿಯನ್ನು ಕೈಗೆತ್ತಿಕೊಂಡ ಬಳಿಕ, ಆ ವರ್ಷ 1.91 ಲಕ್ಷ ಭಕ್ತರು ಅಮರನಾಥ ದರ್ಶನ ಪಡೆದಿದ್ದರು. 2018ರಲ್ಲಿ 2.85 ಲಕ್ಷ ಭಕ್ತರು ಶಿವಲಿಂಗ ದರ್ಶನ ಪಡೆದಿದ್ದರು.

ಗಂದೆರ್‌ಬಾಲ್‌ನ ಬಲ್ತಾಲ್‌ ಮಾರ್ಗ ಮತ್ತು ಅನಂತ್‌ನಾಗ್‌ನ ಪೆಹಲ್ಗಾಮ್‌ ಮಾರ್ಗದಲ್ಲಿ ಆರಂಭವಾಗಿರುವ ಈ ಯಾತ್ರೆಯು ಶ್ರಾವಣ ಪೂರ್ಣಿಮೆಯಂದು ಅಂದರೆ ಆಗಸ್ಟ್‌ 15ರಂದು ಮುಕ್ತಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT