7

ಭಾರತ–ಅಮೆರಿಕ ಮಾತುಕತೆ ಮುಂದೂಡಿಕೆ

Published:
Updated:

ನವದೆಹಲಿ: ಕೆಲವು ಅನಿವಾರ್ಯ ಕಾರಣಗಳಿಂದ ಸಚಿವರ ಮಟ್ಟದ ’2+2’ ಮಾತುಕತೆಯನ್ನು ಮುಂದೂಡಿರುವುದಾಗಿ ಅಮೆರಿಕವು ಭಾರತಕ್ಕೆ ತಿಳಿಸಿದೆ.

ಜುಲೈ 6ರಂದು ಈ ಮಾತುಕತೆ ನಿಗದಿಯಾಗಿತ್ತು. ಇದಕ್ಕಾಗಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅಮೆರಿಕಗೆ ತೆರಳಿ ವಿದೇಶಾಂಗ ಕಾರ್ಯದರ್ಶಿ ಮೈಕಲ್‌ ಆರ್‌ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಜೇಮ್ಸ್‌ ಮ್ಯಾಟ್ಟಿಸ್‌ ಜತೆ ಮಾತುಕತೆ ನಡೆಸುವ ಉದ್ದೇಶವಿತ್ತು.

‘ಜುಲೈ 6ರ ಮಾತುಕತೆಯನ್ನು ಮುಂದೂಡಿರುವುದಕ್ಕೆ ಪೊಂಪಿಯೊ ಅವರು ವಿಷಾದ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುಷ್ಮಾ ಸ್ವರಾಜ್‌ ಜತೆ ಚರ್ಚಿಸಿದ್ದಾರೆ. ತಪ್ಪಿಸಿಕೊಳ್ಳಲಾಗದ ಕೆಲವು ಕಾರಣಗಳಿಂದ ಮಾತುಕತೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಶೀಘ್ರ ಹೊಸ ದಿನಾಂಕ ನಿಗದಿಪಡಿಸಲಾಗುವುದು’ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !