ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಡಮಾನ್: ಬುಡಕಟ್ಟು ಜನರಿಂದ ಅಮೆರಿಕ ಪ್ರವಾಸಿಗನ ಹತ್ಯೆ

Last Updated 21 ನವೆಂಬರ್ 2018, 18:16 IST
ಅಕ್ಷರ ಗಾತ್ರ

ನವದೆಹಲಿ: ಅಂಡಮಾನ್‌ ಮತ್ತು ನಿಕೋಬಾರ್‌ನ ಉತ್ತರ ಸೆಂಟಿನಲ್‌ ದ್ವೀಪದಲ್ಲಿ ಅಮೆರಿಕದ ಪ್ರವಾಸಿಗರೊಬ್ಬರನ್ನು ಬುಡಕಟ್ಟು ಜನರು ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಾನ್‌ ಅಲೆನ್‌ ಚಾವ್‌ (27) ಮೃತಪಟ್ಟವರು.ಈ ಕುರಿತು ಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜಾನ್‌ ಅವರನ್ನು ದ್ವೀಪಕ್ಕೆ ಕರೆದುಕೊಂಡು ಹೋಗಿರುವ ಮೀನುಗಾರರನ್ನು ಬಂಧಿಸಿದ್ದಾರೆ.

‘ಸ್ಥಳೀಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಜಾನ್‌ ಪತ್ತೆಗೆ ಪ್ರಯತ್ನಿಸುತ್ತಿದ್ದೇವೆ’ ಎಂದು ಅಮೆರಿಕ ಕಾನ್ಸುಲೇಟ್‌ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಈ ಹಿಂದೆಯೂ ಜಾನ್‌ ಐದು ಬಾರಿ ಅಂಡಮಾನ್‌ ಮತ್ತು ನಿಕೋಬರ್‌ ದ್ವೀಪಗಳಿಗೆ ಭೇಟಿ ನೀಡಿದ್ದರು ಎಂದು ಪೋರ್ಟ್‌ ಬ್ಲೇರ್‌ನ ಪತ್ರಿಕೆಗಳು ವರದಿ ಮಾಡಿವೆ. ಸೆಂಟಿನಲ್‌ ದ್ವೀಪದ ಬುಡಕಟ್ಟು ಜನರನ್ನು ಭೇಟಿಯಾಗಲು ಅವರು ಬಯಸಿದ್ದರು ಎಂದೂ ಹೇಳಿವೆ.

ಹೊರ ಜಗತ್ತಿನೊಂದಿಗೆ ಸಂಪರ್ಕವಿಲ್ಲದ ಇಲ್ಲಿನ ಬುಡಕಟ್ಟು ಜನರು, ಯಾರು ಅಲ್ಲಿಗೆ ತೆರಳಿದರೂ ಅವರ ಮೇಲೆ ಬಾಣಗಳಿಂದ ದಾಳಿ ಮಾಡುತ್ತಾರೆ ಎಂದಿವೆ.

ನವೆಂಬರ್‌ 16ರಂದು ಜಾನ್‌ ಅವರು ಮೀನುಗಾರರ ದೋಣಿಯಲ್ಲಿ ಸೆಂಟಿನಲ್‌ ದ್ವೀಪದ ಸಮೀಪಕ್ಕೆ ತೆರಳಿದ್ದರು. ಅಲ್ಲಿಂದ ಸಣ್ಣ ದೋಣಿಯ ಮೂಲಕ ಅವರು ಒಬ್ಬರೇ ದ್ವೀಪಕ್ಕೆ ತೆರಳಿದ್ದರು’ ಎಂದೂ ವರದಿಯಲ್ಲಿ ಹೇಳಲಾಗಿದೆ.

ಜಾನ್‌ ಅವರ ಮೃತದೇಹವನ್ನು ಮೀನುಗಾರರು ನೋಡಿದ್ದಾರೆ. ಆದರೆ ಅದನ್ನು ಹೊರತೆಗೆಯಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT