ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಲಾಕ್‌ಡೌನ್: ಕೇರಳದಲ್ಲಿ ಮನೆವರೆಗೆ ಹಾರಿ ಬಂತು ಸಿಗಡಿ ಮೀನಿನ ಚೀಲ

Last Updated 16 ಏಪ್ರಿಲ್ 2020, 10:48 IST
ಅಕ್ಷರ ಗಾತ್ರ
ADVERTISEMENT
""
""

ತಿರುವನಂತಪುರ: ಲಾಕ್‌ಡೌನ್ ಉಲ್ಲಂಘನೆ ಪತ್ತೆ ಮಾಡಲು ಪೊಲೀಸರು ಡ್ರೋನ್‌ಗಳನ್ನು ಬಳಸುತ್ತಿರುವಾಗ ಕೇರಳದ ವ್ಯಕ್ತಿಯೊಬ್ಬರು ಮನೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ಸೂಪರ್‌ ಮಾರ್ಕೆಟ್‌ನಿಂದ ಡ್ರೋನ್ ಮೂಲಕ ಸಿಗಡಿ ಮೀನು ತರಿಸಿಕೊಂಡಿದ್ದಾರೆ.

ಕೊಟ್ಟಾಯಂ ಜಿಲ್ಲೆಯ ಚಂಗನಶ್ಶೇರಿ ನಿವಾಸಿಯಾಗಿರುವ ಶಮೀರ್ ತೊಪ್ಪಿಲ್ ಎಂಬುವವರೇ ಡ್ರೋನ್ ಮೂಲಕ ಸಿಗಡಿ ಮೀನು ತರಿಸಿಕೊಂಡವರು. ಇವರು ವೃತ್ತಿಪರ ಡ್ರೋನ್ ಆಪರೇಟರ್ ಸಹ ಹೌದು. 500 ಗ್ರಾಂ ಸಿಗಡಿ ಮೀನುಗಳನ್ನು ಡ್ರೋನ್ ಮೂಲಕ ತರಿಸಿಕೊಂಡಿದ್ದಾರೆ.

ತರಿಸಿಕೊಂಡದ್ದು ಹೀಗೆ...: ಮೊಬೈಲ್ ದೂರವಾಣಿ ಮೂಲಕ ಸೂಪರ್‌ ಮಾರ್ಕೆಟ್‌ಗೆ ಕರೆ ಮಾಡಿ ಸಿಗಡಿ ಮೀನಿಗೆ ಆರ್ಡರ್ ಮಾಡಿದ ಶಮೀರ್, ಪೊಟ್ಟಣವನ್ನು ಸಿದ್ಧಪಡಿಸಿ ಇಡುವಂತೆ ಸೂಚಿಸಿದ್ದಾರೆ. ಜತೆಗೆ ಆನ್‌ಲೈನ್ ಮೂಲಕ ಮೊತ್ತವನ್ನು ಪಾವತಿ ಮಾಡಿದ್ದಾರೆ. ಬಳಿಕ ಮನೆಯ ತಾರಸಿಗೆ ತೆರಳಿ ಅಲ್ಲಿಂದ ಡ್ರೋನ್ ಆಪರೇಟ್ ಮಾಡಿದ್ದಾರೆ. 2000 ಅಡಿ ಎತ್ತರದಲ್ಲಿ ಹಾರಿಕೊಂಡು ಹೋದ ಡ್ರೋನ್ ಕೆಲವೇ ಕ್ಷಣಗಳಲ್ಲಿ ಸೂಪರ್‌ ಮಾರ್ಕೆಟ್‌ ತಲುಪಿದೆ. ಅದನ್ನು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿಟ್ಟ ಶಮೀರ್, ಸಿಗಡಿ ಮೀನಿನ ಚೀಲವನ್ನು ಡ್ರೋನ್‌ನಲ್ಲಿ ಇರುವ ನೇತಾಡುವ ಪಟ್ಟಿಗೆ ಸಿಲುಕಿಸುವಂತೆ ಅಂಗಡಿಯಾತನಿಗೆ ತಿಳಿಸಿದ್ದಾರೆ.

ವಿಡಿಯೊ ಕ್ಯಾಮರಾದ ಮೂಲಕ ಡ್ರೋನ್‌ ಚಲನವಲನದ ಮೇಲೆ ನಿಗಾ ಇರಿಸಿಕೊಂಡು ಅದನ್ನು ಆಪರೇಟ್ ಮಾಡಿದ್ದಾರೆ ಶಮೀರ್. ಅಂಡಿಯಾತ ಮೀನಿನ ಚೀಲ ಡ್ರೋನ್‌ಗೆ ಸಿಕ್ಕಿಸಿದ ಕೂಡಲೇ ಮತ್ತೆ ಮನೆ ಕಡೆ ಚಲಾಯಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಡ್ರೋನ್ ಸಿಗಡಿ ಮೀನಿನ ಚೀಲದ ಸಹಿತ ಮನೆಯ ತಾರಸಿಯಲ್ಲಿಳಿದಿದೆ.

ಡ್ರೋನ್ ಆಪರೇಟ್ ಮಾಡಲು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಅನುಮತಿಯನ್ನೂ ಶಮೀರ್ ಪಡೆದುಕೊಂಡಿದ್ದಾರೆ. ಲಾಕ್‌ಡೌನ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ರೀತಿ ಮಾಡಿದ್ದಾಗಿಯೂ ಅವರು ತಿಳಿಸಿದ್ದಾರೆ. ಡ್ರೋನ್‌ಗಳ ದುರ್ಬಳಕೆ ಬಗ್ಗೆಯೂ ಎಚ್ಚರಿಕೆ ನೀಡಿರುವ ಅವರು, ಸೂಕ್ತ ತರಬೇತಿ ಇಲ್ಲದೆ ಮತ್ತು ಅನುಮತಿ ಇಲ್ಲದೆ ಅವುಗಳನ್ನು ಆಪರೇಟ್ ಮಾಡಬಾರದು ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT