ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್‌ ಶಾಗೆ ಪ್ರಶಾಂತ್‌ ಕಿಶೋರ್ ಸಾಟಿಯೇ? ಬಿಜೆಪಿ ಲೇವಡಿ

Last Updated 9 ಜೂನ್ 2019, 11:04 IST
ಅಕ್ಷರ ಗಾತ್ರ

ಕೊಲ್ಕತ್ತಾ:ಪಶ್ಚಿಮ ಬಂಗಾಳದಲ್ಲಿ ಇದೀಗ ವಿಧಾನಸಭೆ ಚುನಾವಣೆಯ ಕಾವು ನಿಧಾನವಾಗಿ ರಂಗೇರುತ್ತಿದೆ. ಮುಂದಿನ ವರ್ಷವೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ವಿವಿಧ ಪಕ್ಷಗಳು ರಣತಂತ್ರ ಹೆಣೆಯುತ್ತಿವೆ. ಪಶ್ಚಿಮ ಬಂಗಾಳದ ಬಗ್ಗೆ ಭರವಸೆ ಇರಿಸಿಕೊಂಡಿರುವ ಬಿಜೆಪಿಯನ್ನು ಎದುರಿಸಲು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್‌ ಅವರ ಮೊರೆ ಹೋಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಟಿಎಂಸಿಗೆ ಪ್ರಶಾಂತ್ ಕಿಶೋರ್ ಪ್ರಚಾರ ತಂತ್ರ ಮತ್ತು ಮತ ಸೆಳೆಯುವ ವಿಧಾನಗಳನ್ನು ರೂಪಿಸಿಕೊಡುವುದುಬಹುತೇಕ ಖಚಿತಗೊಂಡಿದೆ. ಈ ವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸಿರುವ ಬಿಜೆಪಿ ಇದೀಗ ಅಮಿತ್‌ ಶಾ ಮತ್ತು ಪ್ರಶಾಂತ್ ಕಿಶೋರ್ ಅವರ ಸಾಮರ್ಥ್ಯವನ್ನು ಮುಖಾಮುಖಿ ಮಾಡುತ್ತಿರುವ ಬಿಜೆಪಿಯು ಅಮಿತ್‌ ಶಾ ಬಹುದೊಡ್ಡ ಚುನಾವಣಾ ನಿಪುಣ. ಅವರ ಮುಂದೆಪ್ರಶಾಂತ್‌ ಕಿಶೋರ್‌ ಏನೇನೂ ಅಲ್ಲ ಎಂದು ಹೀಗಳೆದಿದೆ.

‘ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಜನರ ವಿಶ್ವಾಸಕಳೆದುಕೊಂಡಿದ್ದಾರೆ.ಯಾವುದೇಚುನಾವಣಾ ತಜ್ಞರಿಗೆ ಇದನ್ನು ಸರಿಪಡಿಸಲು ಸಾದ್ಯವಿಲ್ಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿಕೈಲಾಸ್ ವಿಜಯ್‍ವರ್ಗಿ ಲೇವಡಿ ಮಾಡಿದ್ದಾರೆ.

‘ಚುನಾವಣೆ ನಿರ್ವಹಣೆಯ ಕಾಲೇಜಿಗೆ ಅಮಿತ್‌ ಶಾ ಪ್ರಾಂಶುಪಾಲರಾದರೆ, ಪ್ರಶಾಂತ್ ಕಿಶೋರ್‌ ಇನ್ನೂ ವಿದ್ಯಾರ್ಥಿ’ ಎಂದು ಅವರು ತುಲನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT