ಹಿಂದೆ ಶಿರಚ್ಛೇದ, ಈಗ ಬಿಡುಗಡೆ: ಶಾ

ಗುರುವಾರ , ಮಾರ್ಚ್ 21, 2019
26 °C

ಹಿಂದೆ ಶಿರಚ್ಛೇದ, ಈಗ ಬಿಡುಗಡೆ: ಶಾ

Published:
Updated:
Prajavani

ಗೊಡ್ಡಾ, ಜಾರ್ಖಂಡ್: ‘ಪಾಕಿಸ್ತಾನ ಈ ಮೊದಲು ಯೋಧರ ಶಿರಚ್ಛೇದ ಮಾಡಿ ಮೃತದೇಹವನ್ನು ಭಾರತಕ್ಕೆ ಕಳುಹಿಸುತ್ತಿತ್ತು. ಆದರೆ ಈಗ, ತನ್ನ ವಶದಲ್ಲಿದ್ದ ಭಾರತೀಯ ಪೈಲಟ್‌ನನ್ನು ಕೇವಲ 48 ಗಂಟೆಯೊಳಗೆ ಅದು ಬಿಡುಗಡೆ ಮಾಡಿದೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಭಯೋತ್ಪಾದನೆ ವಿರುದ್ಧ ಭಾರತದ ಬದಲಾದ ಪ್ರತಿಕ್ರಿಯೆಯನ್ನು ಶಾ ಅವರು ಒತ್ತಿ ಹೇಳಿದರು.

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಒಳಗೇ ಹೊಕ್ಕು ಜೈಷ್‌ ಎ ಮೊಹಮ್ಮದ್‌ ಉಗ್ರರ ಶಿಬಿರಗಳನ್ನು ನಾಶಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಸಾಬೀತುಪಡಿಸಿದೆ ಎಂದು ಅವರು ಹೇಳಿದ್ದಾರೆ.

‘ಈ ಹಿಂದೆ ಉಗ್ರರು ಸ್ಫೋಟಕಗಳನ್ನು ಇರಿಸಿ ಪರಾರಿಯಾಗುತ್ತಿದ್ದರು. ಆದರೆ ಇದೀಗ ಪ್ರತಿಯೊಂದು ಭಯೋತ್ಪಾದಕ ಕೃತ್ಯಗಳಿಗೂ ತಕ್ಕ ಉತ್ತರ ನೀಡಲಾಗುತ್ತಿದೆ’ ಎಂದಿದ್ದಾರೆ. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !