7

ನೋಟು ರದ್ದತಿಯಿಂದ ಧನಿಕರಾದ ಅಮಿತ್ ಶಾ: ರಾಹುಲ್ ಟ್ವೀಟ್ 

Published:
Updated:

ದೆಹಲಿ: ನೋಟು ರದ್ದತಿ ನಂತರ ₹500 ಮತ್ತು ₹1000 ಮುಖಬೆಲೆಯ ನೋಟುಗಳು ಹೆಚ್ಚು ಸಂಗ್ರಹ ಆಗಿದ್ದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನಿರ್ದೇಶಕರಾಗಿರುವ ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್‍ನಲ್ಲಿ ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆ ರಾಹುಲ್‍ಗಾಂಧಿ ಅಮಿತ್ ಶಾ ಅವರನ್ನು ಟ್ರೋಲ್ ಮಾಡಿದ್ದಾರೆ.

ನೀವು ನಿರ್ದೇಶಕರಾಗಿರುವ ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್‍ನಲ್ಲಿ ಹಳೆಯ ನೋಟುಗಳನ್ನು ಬದಲಿಸಿ ಕೊಟ್ಟು ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಕ್ಕೆ ಅಭಿನಂದನೆಗಳು. 5 ದಿನದಲ್ಲಿ ₹750 ಕೋಟಿ! ಕೋಟಿಗಟ್ಟಲೆ ಜನರು ನೋಟು ರದ್ದತಿಯಿಂದಾಗಿ ಸಂಕಷ್ಟಕ್ಕೀಡಾದಾಗ ನೀವು ಮಾಡಿದ ಸಾಧನೆಗೆ ಸಲಾಂ ಎಂದು ರಾಹುಲ್ ಕಾಲೆಳೆದಿದ್ದಾರೆ.

ರದ್ದಾದ ನೋಟುಗಳನ್ನು ಹೆಚ್ಚಿನ ಪ್ರಮಾಣಗಳಲ್ಲಿ ಸ್ವೀಕರಿಸಿದ ಬ್ಯಾಂಕ್‍ನ ನಿರ್ದೇಶಕ, ನೋಟು ರದ್ದತಿ ನಂತರ ಶೇ.81 ಹೆಚ್ಚು ಧನಿಕನಾದ ಪಕ್ಷದ ಅಧ್ಯಕ್ಷ  ಎಂದು ಬರೆದು ಅಮಿತ್ ಶಾ ಅವರ ಫೋಟೊವೊಂದನ್ನು ರಾಹುಲ್ ಟ್ವೀಟಿಸಿದ್ದಾರೆ.

2016 ನವೆಂಬರ್ 8 ರಂದು ನೋಟುರದ್ದು ಆದ ನಂತರ ನವೆಂಬರ್ 14ರ ವರೆಗೆ ಶಾ ನಿರ್ದೇಶಕರಾಗಿರುವ ಬ್ಯಾಂಕ್‍ನಲ್ಲಿ 745.59 ಕೋಟಿ ಠೇವಣಿ ಇಡಲಾಗಿದೆ ಎಂದು ಆರ್‍‍ಟಿಐ ಮೂಲಕ ಮಾಹಿತಿ ಬಹಿರಂಗವಾಗಿದೆ.

  #ShahZyadaKhaGaya ಟ್ರೆಂಡಿಂಗ್
ಶಾ ನಿರ್ದೇಶಕರಾಗಿರುವ ಬ್ಯಾಂಕ್‍ನಲ್ಲಿ  ನೋಟುರದ್ದತಿ ನಂತರ ಠೇವಣಿ ಇಡಲಾದ ಹಣದ ಮಾಹಿತಿ ಬಹಿರಂಗವಾಗುತ್ತಿದ್ದಂತೆ  #ShahZyadaKhaGaya ಎಂಬ ಹ್ಯಾಶ್‍ಟ್ಯಾಗ್‍ ಟ್ವಿಟರ್‍‍ನಲ್ಲಿ ಟ್ರೆಂಡ್ ಆಗಿದೆ.

ಶಾ ಬಗ್ಗೆ ಪ್ರಕಟವಾದ ಸುದ್ದಿಯನ್ನು ಡಿಲೀಟ್ ಮಾಡುವ ಮೂಲಕ ಟೈಮ್ಸ್ ನೌ ಈಗ ಟೈಮ್ಸ್ ಕೌ ಆಗಿದೆ.

-ಮಿ. ಸೆರ್ಟಿಟ್ಯೂಡ್

ಬಿಜೆಪಿ ಶ್ರೀಮಂತ ಪಕ್ಷ- ಹೂಡಿಕೆ ಮಾಡಿದ್ದು ಯಾರು ಎಂಬುದರ ಬಗ್ಗೆ ಗೊತ್ತಿಲ್ಲ

ಆರ್‍ಎಸ್ಎಸ್-  ಉಗ್ರ ಸಂಘಟನೆ ಎಂದು ಹೇಳುತ್ತಿದ್ದರೂ ಯಾರು ಹೂಡಿಕೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ

ಶಾ ಮತ್ತು  ಅವರ ಮಗ ಧನಿಕರಾಗುತ್ತಾ ಹೋಗುತ್ತಾರೆ -  ಹೂಡಿಕೆ ಮಾಡಿದ್ದು ಯಾರು ಎಂಬುದರ ಬಗ್ಗೆ ಗೊತ್ತಿಲ್ಲ ಅಂಧಭಕ್ತರು, ಬಿಜೆಪಿ  ಭ್ರಷ್ಟಾಚಾರ ವಿರೋಧಿ

-ಬ್ಲಾಕ್ ಮಾಂಬಾ

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 2

  Sad
 • 0

  Frustrated
 • 3

  Angry

Comments:

0 comments

Write the first review for this !