ಶಂಕಿತರ ಸುಳಿವು ನೀಡಿದವರಿಗೆ ₹50 ಲಕ್ಷ

7
ಅಮೃತ್‌ಸರ ಬಾಂಬ್‌ ಸ್ಫೋಟ

ಶಂಕಿತರ ಸುಳಿವು ನೀಡಿದವರಿಗೆ ₹50 ಲಕ್ಷ

Published:
Updated:
Deccan Herald

ಚಂಡಿಗಡ : ಅಮೃತಸರದ ನಿರಂಕಾರಿ ಪಂಥದ ಪ್ರಾರ್ಥನಾ ಮಂದಿರದ ಮೇಲೆ ಭಾನುವಾರ ಗ್ರನೇಡ್ ದಾಳಿಯಲ್ಲಿ ಭಾಗಿಯಾದವರ ಬಗ್ಗೆ ಸುಳಿವು ನೀಡುವ ವ್ಯಕ್ತಿಗಳಿಗೆ ₹50 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ಸಿಂಗ್‌ ಘೋಷಿಸಿದ್ದಾರೆ.

ಪಂಜಾಬ್‌ ಪೊಲೀಸರ ಸಹಾಯವಾಣಿ –181ಕ್ಕೆ ಮಾಹಿತಿ ನೀಡಬಹುದಾಗಿದ್ದು, ಮಾಹಿತಿದಾರರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.

ಘಟನಾ ನಡೆದ ಸ್ಥಳಕ್ಕೆ ರಾಷ್ಟ್ರೀಯ ತನಿಖಾದಳ (ಎನ್‌ಐಎ) ಹಾಗೂ ಸ್ಫೋಟ ತಜ್ಞರು ಭಾನುವಾರವೇ ಭೇಟಿನೀಡಿ ಮಾಹಿತಿ ಕಲೆಹಾಕಿದ್ದು, ಪಂಜಾಬ್‌ ಪೊಲೀಸ್‌ ಘಟಕದ  ಹಿರಿಯ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದರು.

ನಿರಂಕಾರಿ ಭವನದ ಮೇಲೆ ನಡೆದ ದಾಳಿಯಲ್ಲಿ ಮೂವರು ಮೃತಪಟ್ಟು, 10 ಜನರಿಗೆ ಗಾಯಗಳಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !