ಅಮೃತಸರ್‌ ರೈಲು ಅಪಘಾತ ಪ್ರಕರಣ: ಸಿಧು ಪತ್ನಿಗೆ ಕ್ಲೀನ್‌ಚಿಟ್‌

7
ಅಮೃತಸರ್‌ ರೈಲು ಅಪಘಾತ ಪ್ರಕರಣ

ಅಮೃತಸರ್‌ ರೈಲು ಅಪಘಾತ ಪ್ರಕರಣ: ಸಿಧು ಪತ್ನಿಗೆ ಕ್ಲೀನ್‌ಚಿಟ್‌

Published:
Updated:
Deccan Herald

ಚಂಡೀಗಡ: ಅಮೃತಸರ ರೈಲು ಅಪಘಾತದಲ್ಲಿ 60 ಜನ ಸಾವಿಗೀಡಾಗಿರುವ ಪ್ರಕರಣದಲ್ಲಿ ಪಂಜಾಬ್‌ ಸಚಿವ ನವಜೋತ್‌ಸಿಂಗ್‌ ಸಿಧು ಪತ್ನಿ, ನವಜೋತ್‌ ಕೌರ್‌ಗೆ ಕ್ಲೀನ್‌ಚಿಟ್‌ ಸಿಕ್ಕಿದೆ. 

ಈ ಬಗ್ಗೆ ತನಿಖೆ ನಡೆಸುತ್ತಿದ್ದ ಜಲಂಧರ್‌ ವಿಭಾಗೀಯ ಆಯಕ್ತ ಬಿ. ಪುರುಷಾರ್ಥ ನೇತೃತ್ವದ ಮ್ಯಾಜಿಸ್ಟೀಯಲ್‌ ತನಿಖಾ ಸಮಿತಿ ಅವರಿಗೆ ಕ್ಲೀನ್‌ಚಿಟ್‌ ನೀಡಿದೆ. ಕಳೆದ ಅಕ್ಟೋಬರ್‌ 19ರಂದು ಅಮೃತ್‌ಸರ ಹೊರವಲಯದ ಜೋದಾ ಪಾಠಕ್‌ ಬಳಿಯ ದಸರಾ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಕಾಂಗ್ರೆಸ್‌ನ ಪಾಲಿಕೆ ಸದಸ್ಯರೊಬ್ಬರ ಪುತ್ರ ಸೌರಭ್‌ ಮಿಥು ಮದನ್‌ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ನವಜೋತ್‌ ಕೌರ್‌ ಮುಖ್ಯ ಅತಿಥಿಯಾಗಿದ್ದರು.

ರಾವಣನ ಪ್ರತಿಕೃತಿ ದಹನವನ್ನು ಜನರು ರೈಲು ಹಳಿಯ ಬಳಿ ಮತ್ತು ಮೇಲೆ ನಿಂತು ಅದನ್ನು ವೀಕ್ಷಿಸುತ್ತಿದ್ದರು. ಈ ವೇಳೆ, ಜಲಂಧರ್‌ನಿಂದ ಅಮೃತ್‌ಸರ ಕಡೆಗೆ ವೇಗವಾಗಿ ಬರುತ್ತಿದ್ದ ಈ ರೈಲು ಜನರ ಮೇಲೆ ಹಾದು ಹೋಗಿತ್ತು. 60ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !