ಸಂಸತ್‌ಗೆ ಬಂದ ಹಿಟ್ಲರ್: ವಿಶೇಷ ಸ್ಥಾನಮಾನಕ್ಕಾಗಿ ವಿಶೇಷ ವೇಷ ಹಾಕಿದ ಆಂಧ್ರ ಸಂಸದ

7

ಸಂಸತ್‌ಗೆ ಬಂದ ಹಿಟ್ಲರ್: ವಿಶೇಷ ಸ್ಥಾನಮಾನಕ್ಕಾಗಿ ವಿಶೇಷ ವೇಷ ಹಾಕಿದ ಆಂಧ್ರ ಸಂಸದ

Published:
Updated:

ನವದೆಹಲಿ: ತೆಲುಗು ದೇಶಂ ಪಕ್ಷದ(ಟಿಡಿಪಿ) ಸಂಸದ ಹಾಗೂ ಮಾಜಿ ನಟ ನರಮಳ್ಳಿ ಶಿವಪ್ರಸಾದ್‌ ಅವರು ಜರ್ಮನಿ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್‌ ವೇಷ ಧರಿಸಿ ಸಂಸತ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಆಂಧ್ರಪ್ರದೇಶ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಪ್ರತಿಭಟಿಸಿದರು.

ಹಿಟ್ಲರ್‌ ರೀತಿಯಲ್ಲಿ ಕೀರು ಮೀಸೆ ಬಿಟ್ಟು ಕಣ್ಣು ಕೆಂಪಾಗಿಸಿ ಕ್ಯಾಮೆರಾಗೆ ಪೋಸು ನೀಡಿದ ಶಿವಪ್ರಸಾದ್‌ ಶ್ವೇತವರ್ಣದ ಅಂಗಿ, ಟೈ, ಸ್ವಸ್ತಿಕ್‌ ಚಿಹ್ನೆ ಇರುವ ಖಾಕಿ ಕೋಟ್‌ ಧರಿಸಿ ಗಮನ ಸೆಳೆದರು.

‌ಶಿವಪ್ರಸಾದ್‌ ಅವರು ಈ ರೀತಿಯ ವೇಷಗಳನ್ನು ಧರಿಸಿ ಸಂಸತ್‌ ಪ್ರವೇಶಿಸುತ್ತಿರುವುದು ಅಥವಾ ಪ್ರತಿಭಟನೆ ನಡೆಸುತ್ತಿರುವುದು ಇದೇ ಮೊದಲಲ್ಲ. ಮೂರು ದಿನಗಳ ಹಿಂದೆ ಶ್ರೀರಾಮನ ಅವತಾರದಲ್ಲಿ ಸಂಸತ್‌ಗೆ ಬಂದಿದ್ದ ಅವರು, ಈ ಹಿಂದೆ ಸಾಯಿಬಾಬಾ, ನಾರದ ಅವತಾರಗಳಲ್ಲಿಯೂ ಕಾಣಿಸಿಕೊಂಡಿದ್ದರು.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರವು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಸಿ ಬಹುದಿನಗಳಿಂದ ಪ್ರತಿಭಟನೆ ನಡೆಸುತ್ತಿದೆ. ಮೋದಿ ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಹಾಗೂ ವಿಶೇಷ ಸ್ಥಾನಮಾನದ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದ್ದ ಟಿಡಿಪಿ ಮಾರ್ಚ್‌ ತಿಂಗಳಲ್ಲಿ ಎನ್‌ಡಿಎ ಮೈತ್ರಿ ಕೂಟದಿಂದ ಹೊರಬಂದಿತ್ತು.

ಇದರೊಂದಿಗೆ 2014ರಲ್ಲಿ ಅಧಿಕಾರಕ್ಕೇರಿದಾಗಿನಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದ ಮೊದಲ ರಾಜಕೀಯ ಪಕ್ಷ ಎನಿಸಿದೆ.

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 1

  Sad
 • 1

  Frustrated
 • 5

  Angry

Comments:

0 comments

Write the first review for this !