ಅಂಕಿವ್‌ಗೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನ ತೊರೆಯುವಂತೆ ಎಬಿವಿಪಿ ಸೂಚನೆ

7

ಅಂಕಿವ್‌ಗೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನ ತೊರೆಯುವಂತೆ ಎಬಿವಿಪಿ ಸೂಚನೆ

Published:
Updated:

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಎಬಿವಿಪಿಯ (ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌) ಅಂಕಿವ್‌ ಬೈಸೊಯಾ ಅವರ ನಕಲಿ ಪದವಿ ಪ್ರಮಾಣಪತ್ರ ನೀಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಅಧ್ಯಕ್ಷ ಸ್ಥಾನ ತೊರೆಯುವಂತೆ ಎಬಿವಿಪಿ ಸೂಚಿಸಿದೆ.

ಅಂಕಿವ್‌ ಬೈಸೊಯಾ ನಕಲಿ ಪದವಿ ಪತ್ರಗಳನ್ನು ನೀಡಿ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಪಡೆದಿದ್ದರು. ಅಂಕಿವ್‌ ನೀಡಿರುವ ಪದವಿ ಪತ್ರಗಳು ನಕಲಿ ಎಂದು ತಿರುವಲ್ಲೂವರ್ ವಿಶ್ವವಿದ್ಯಾಲಯ ವರದಿ ‌‌‌ನೀಡಿರುವುದರಿಂದ ಅವರು ವಿಚಾರಣೆ ಎದುರಿಸಬೇಕಾಗಿದೆ. ಇದರಿಂದ ಮುಜುಗರಕ್ಕೆ ಒಳಗಾಗಿರುವ ಎಬಿವಿಪಿ ಅಂಕಿವ್‌ ಬಸೋಯ ಅವರಿಗೆ ಹುದ್ದೆ ತೊರೆಯುವಂತೆ ಸೂಚಿಸಿದೆ. 

ದೆಹಲಿ ಡಿಯುಎಸ್‌ಯು ಅಧ್ಯಕ್ಷ ಅಂಕಿವ್‌ ಬೈಸೊಯಾಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ. ವಿಚಾರಣೆ ಮುಗಿಯುವವರೆಗೂ ಅವರನ್ನು ಸಂಘಟನೆಯ ಪ್ರಮುಖ ಜವಾಬ್ದಾರಿಗಳಿಂದ ದೂರ ಇರುವಂತೆಯೂ ಸೂಚಿಸಲಾಗಿದೆ ಎಂದು ಎಬಿವಿಪಿ ಪ್ರಕಟಣೆಯಲ್ಲಿ ತಿಳಿಸಿದೆ. 

ಅಂಕಿವ್‌ ಬೈಸೊಯಾ ಅವರ ಪದವಿ ಪತ್ರಗಳನ್ನು ಪರಿಶೀಲಿಸಿ ನವೆಂಬರ್ 20ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ದೆಹಲಿ ಹೈಕೋರ್ಟ್‌ ಸೋಮವಾರ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿತ್ತು.

ಇದನ್ನೂ ಓದಿ: ದೆಹಲಿ ವಿವಿಯ ಬಸೋಯ್‌ ಅವರಿಂದ ನಕಲಿ ದಾಖಲಾತಿ ಸಲ್ಲಿಕೆ:ಎನ್‌ಎಸ್‌ಯುಐ ಆರೋಪ

ಬರಹ ಇಷ್ಟವಾಯಿತೆ?

 • 3

  Happy
 • 4

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !