ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ್‌ಗೆ ಆಗ್ರಹಿಸಿ ಅಣ್ಣಾ ಉಪವಾಸ

Last Updated 30 ಜನವರಿ 2019, 20:15 IST
ಅಕ್ಷರ ಗಾತ್ರ

ರಾಳೆಗಣ ಸಿದ್ಧಿ, ಮಹಾರಾಷ್ಟ್ರ: ಮಹಾರಾಷ್ಟ್ರ ಸರ್ಕಾರದಿಂದ ಲೋಕಪಾಲ್ ಜಾರಿ ಹಾಗೂ ಕೇಂದ್ರ ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸದ್ದನ್ನು ‌ಖಂಡಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬುಧವಾರ ಉಪವಾಸ ಸತ್ಯಾಗ್ರಹ
ಆರಂಭಿಸಿದ್ದಾರೆ.

ಅಹ್ಮದ್‌ನಗರ ಜಿಲ್ಲೆಯಲ್ಲಿರುವ ತಮ್ಮ ಹುಟ್ಟೂರಾದ ರಾಳೆಗಣ ಸಿದ್ಧಿ ಗ್ರಾಮದ ಪದ್ಮಾವತಿ ದೇವಿ ದೇವಸ್ಥಾನದಲ್ಲಿಪೂಜೆ ಸಲ್ಲಿಸಿ ವಿದ್ಯಾರ್ಥಿಗಳು, ರೈತರೊಂದಿಗೆ ಪ್ರತಿಭಟನಾ ಜಾಥಾ ನಡೆಸಿ, ಯಾದವ್‌ಬಾಬಾ ದೇವಸ್ಥಾನದ ಬಳಿ ಧರಣಿ ಕುಳಿತರು.

ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದಿರುವ ಅಣ್ಣಾ, ಸ್ವಾಮಿನಾಥನ್ ಕಮಿಷನ್ ವರದಿ ಜಾರಿಗೆ ತರುವುದು, ಲೋಕಾಯುಕ್ತ ನೇಮಕ ಹಾಗೂ ಸರ್ಕಾರ ನೀಡಿರುವ ಭರವಸೆಗಳನ್ನು ಈಡೇರಿಸದಿದ್ದರೆ ಜನಾಂದೋಲನ ಆರಂಭಿಸುವ ಎಚ್ಚರಿಕೆ ನೀಡಿದ್ದಾರೆ.

‘ಕಳೆದ ವರ್ಷ ಮಾರ್ಚ್‌ನಲ್ಲಿ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಉಪವಾಸ ಧರಣಿ ನಡೆಸುತ್ತಿದ್ದಾಗ ಶೀಘ್ರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಿರಿ, ಈಗ ಒಂಬತ್ತು ತಿಂಗಳು ಕಳೆದಿವೆ. ಆದರೂ ಯಾವುದೇ ಭರವಸೆ ಈಡೇರಿಸಿಲ್ಲ, ಹಾಗಾಗಿ ಗ್ರಾಮದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೇವೆ’ ಎಂದು ಅಣ್ಣ ಹಜಾರೆ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT