ಅಣ್ಣಾ ಹಜಾರೆ ಸತ್ಯಾಗ್ರಹ ಅಂತ್ಯ

7
ಏಳು ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಅಣ್ಣಾ ಹಜಾರೆ ಸತ್ಯಾಗ್ರಹ ಅಂತ್ಯ

Published:
Updated:

ಮುಂಬೈ: ಕೇಂದ್ರದಲ್ಲಿ ಲೋಕಪಾಲ ಅನುಷ್ಠಾನ ಮತ್ತು ಲೋಕಪಾಲರ ನೇಮಕಕ್ಕೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಏಳು ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮಂಗಳವಾರ ಸಂಜೆ ಹಿಂಪಡೆದಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವ ರಾಧಾ ಮೋಹನ್‌ ಸಿಂಗ್‌, ಮಹಾ ಸಿಎಂ ಅವರಿಂದ ಅಣ್ಣಹಜಾರೆ ಭೇಟಿ​

ಲೋಕಪಾಲ ನೇಮಕ ಸಂಬಂಧ ಇದೇ 13ರಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸರ್ಕಾರವು ಭರವಸೆ ನೀಡಿದ್ದರಿಂದ ಅವರು ಸತ್ಯಾಗ್ರಹವನ್ನು ನಿಲ್ಲಿಸಿದ್ದಾರೆ.

ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ತಮ್ಮ ಗ್ರಾಮ ರಾಳೇಗಣ ಸಿದ್ದಿಯಲ್ಲಿ ಅವರು ಸತ್ಯಾಗ್ರಹ ನಡೆಸುತ್ತಿದ್ದರು. ಕೇಂದ್ರ ಸಚಿವರಾದ ರಾಧಾ ಮೋಹನ್ ಸಿಂಗ್ ಮತ್ತು ಸುಭಾಷ್ ಭಮ್ರೆ ಅವರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಸತ್ಯಾಗ್ರಹದ ಸ್ಥಳಕ್ಕೆ ತೆರಳಿ, ಹಜಾರೆ ಜತೆಗೆ ಮಾತುಕತೆ ನಡೆಸಿದರು.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !