ಲೋಕಪಾಲ್‌ ಇದ್ದಿದ್ದರೆ ರಫೇಲ್‌ ಹಗರಣ ತಡೆಯಬಹುದಿತ್ತು: ಅಣ್ಣಾ ಹಜಾರೆ

7
ಜನವರಿ 30ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಲೋಕಪಾಲ್‌ ಇದ್ದಿದ್ದರೆ ರಫೇಲ್‌ ಹಗರಣ ತಡೆಯಬಹುದಿತ್ತು: ಅಣ್ಣಾ ಹಜಾರೆ

Published:
Updated:

ನವದೆಹಲಿ: ‘ಲೋಕಪಾಲ್‌ ಜಾರಿಯಾಗಿದ್ದರೆ, ರಫೇಲ್‌ ಹಗರಣವೇ ನಡೆಯುತ್ತಿರಲಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ತಿಳಿಸಿದ್ದಾರೆ.

ರೈತರ ವಿವಿಧ ಬೇಡಿಕೆ ಈಡೇರಿಕೆ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ ಜಾರಿಗೆ ಒತ್ತಾಯಿಸಿ ಇದೇ ಜನವರಿ 30ರಿಂದ ರಾಲೇಗಾಣ್‌ ಸಿದ್ಧಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಲೋಕಪಾಲ ನೇಮಕಕ್ಕೆ ಒತ್ತಾಯಿಸಿ ಜ 30ರಿಂದ ಅಣ್ಣಾ ಹಜಾರೆ ಉಪವಾಸ​

‘ಲೋಕಪಾಲ್‌ ಹಾಗೂ ಲೋಕಾಯುಕ್ತ ಕಾಯ್ದೆ 2013ನ್ನು ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್‌ ತೀರ್ಪಿನ ಹೊರತಾಗಿಯೂ ಸರ್ಕಾರ ಜಾರಿಗೊಳಿಸಿಲ್ಲ. ಇಡೀ ದೇಶವೇ ಅಪಾಯದಲ್ಲಿದ್ದು, ನಿರಂಕುಶ ಪ್ರಭುತ್ವದ ವಾಲುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕಪಾಲ್‌ ಜಾರಿಗಾಗಿ ಕಳೆದ ಎಂಟು ವರ್ಷಗಳಲ್ಲಿ ಅಣ್ಣಾ ಹಜಾರೆ ಅವರು ಇದೀಗ ಮೂರನೇ ಬಾರಿ ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 12

  Happy
 • 2

  Amused
 • 0

  Sad
 • 1

  Frustrated
 • 7

  Angry

Comments:

0 comments

Write the first review for this !