ಬಿಜೆಪಿ ವಿರೋಧಿ ಒಕ್ಕೂಟಕ್ಕೆ ಈಗಾಗಲೇ ಒಂದು ಹೆಸರಿದೆ: ಯೆಚೂರಿ

7

ಬಿಜೆಪಿ ವಿರೋಧಿ ಒಕ್ಕೂಟಕ್ಕೆ ಈಗಾಗಲೇ ಒಂದು ಹೆಸರಿದೆ: ಯೆಚೂರಿ

Published:
Updated:

ಕೊಲ್ಕತ್ತಾ:  2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟದ ವಿರುದ್ಧ ಕಣಕ್ಕಿಳಿದಿರುವ ಪಕ್ಷಗಳ ಒಕ್ಕೂಟಕ್ಕೆ ಈಗಾಗಲೇ ಒಂದು ಹೆಸರು ಇದೆ ಎಂದು ಸಿಪಿಎಂ ನೇತಾರ ಸೀತಾರಾಂ ಯೆಚೂರಿ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿಕೂಟದ ಹೆಸರು ನನಗೆ ಗೊತ್ತಿದೆ. ಆದರೆ ಅದನ್ನು ನಾನು ಈಗ ಹೇಳಲಾರೆ. 2019ರ ಚುನಾವಣೆ ನಂತರ ರೂಪಗೊಳ್ಳುವ ಆ ಒಕ್ಕೂಟ ಪರ್ಯಾಯ ಜಾತ್ಯಾತೀತ ಸರ್ಕಾರ ಆಗಿರುತ್ತದೆ. ಚುನಾವಣೆಯ ನಂತರವೇ ಈ ಮೈತ್ರಿಕೂಟ ರಚನೆಯಾಗಲಿದೆ ಎಂದಿದ್ದಾರೆ.

ಹಾಗಾದರೆ ಆ ಮೈತ್ರಿಕೂಟದ ಹೆಸರೇನು ಎಂದು ಮಾಧ್ಯಮದವರು ಕೇಳಿದಾಗ, ಇನ್ನೇನೂ ಹೇಳಲಾರೆ ಎಂದು ಯೆಚೂರಿ ಉತ್ತರಿಸಿದ್ದಾರೆ.

ಆದಾಗ್ಯೂ, ಚುನಾವಣೆಯ ಮುನ್ನ ಮಹಾಮೈತ್ರಿ ಅಥವಾ ಮಹಾಘಟ್‍ಬಂಧನ್ ರಚಿಸುವ ಯಾವುದೇ ಸಾಧ್ಯತೆ ಇಲ್ಲ. ಯಾಕೆಂದರೆ ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ನಮ್ಮದು.

1996ರಲ್ಲಿ ಯುನೈಟೆಡ್ ಫ್ರಂಟ್ ಎಂಬ ಮೈತ್ರಿಕೂಟ ರಚಿಸಿದ್ದು, 2004ರಲ್ಲಿ ಯುಪಿಎ (ಸಂಯುಕ್ತ ಪ್ರಗತಿಪರ ಮೈತ್ರಿಕೂಟ ) ರಚಿಸಿದ್ದೆವು. ಆದರೆ ಈ ಬಾರಿ ನನಗೆ ಹೆಸರು ಗೊತ್ತಿದ್ದರೂ ನಾನು ಅದನ್ನು  ಹೇಳಲಾರೆ. 2019ರ ಚುನಾವಣೆ ನಂತರ ರೂಪುಗೊಳ್ಳುವ ಈ ಮೈತ್ರಿಕೂಟ ಪರ್ಯಾಯ ಜಾತ್ಯಾತೀತ ಸರ್ಕಾರ ಆಗಲಿದೆ ಎಂದು ಯೆಚೂರಿ ಹೇಳಿದ್ದಾರೆ.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !