ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಘಟಬಂಧನ ಜನ ವಿರೋಧಿ: ಪ್ರಧಾನಿ ನರೇಂದ್ರ ಮೋದಿ

Last Updated 19 ಜನವರಿ 2019, 13:48 IST
ಅಕ್ಷರ ಗಾತ್ರ

ಸಿಲ್ವಾಸಾ: ಮಹಾಘಟಬಂಧನ ಜನ ವಿರೋಧಿಯಾಗಿದೆ ಎಂದುಪ್ರಧಾನಿ ನರೇಂದ್ರ ಮೋದಿ ಶನಿವಾರ ಮಮತಾ ಮಹಾ ರ‍್ಯಾಲಿಯನ್ನು ಟೀಕಿಸಿದ್ದಾರೆ.

ದಾದ್ರ ಮತ್ತು ನಗರ್‌ ಹವೇಲಿಯ ರಾಜಧಾನಿ ಸಿಲ್ವಾಸಾದಲ್ಲಿ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು ಹಾಕಿದ ಬಳಿಕ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮೋದಿ ವಿರೋಧಿಗಳೆಲ್ಲ ನನ್ನ ವಿರುದ್ಧ ಒಂದುಗೂಡಿದರೂ ಅವರಿಂದ ಏನನ್ನು ಸಾಧಿಸಲು ಆಗುವುದಿಲ್ಲ ಎಂದರು.

ಮೋದಿ ಮತ್ತು ವಿರೋಧ ಪಕ್ಷಗಳ ನಾಯಕರ ನಡುವೆ ದೊಡ್ಡ ವ್ಯತ್ಯಾಸವಿದೆ. ಅವರು ತಮ್ಮನ್ನು ರಕ್ಷಣೆ ಮಾಡಿಕೊಳ್ಳು ಪ್ರಯತ್ನಿಸುತ್ತಿದ್ದಾರೆ ಆದರೆಮೋದಿ ತಮ್ಮ ಸಮಯವನ್ನು ದೇಶದ ಹಿತಾಸಕ್ತಿಗೆ ಮೀಸಲಿರಿಸಿದ್ದಾರೆ. ಪಶ್ಚಿಮಬಂಗಾಳದಲ್ಲಿ ಬಿಜೆಪಿಯ ಒಬ್ಬ ಶಾಸಕನಿಂದಾಗಿ ಅವರು ನಿದ್ದೆ ಇಲ್ಲದರಾತ್ರಿಗಳನ್ನು ಕಳೆಯುತ್ತಿದ್ದಾರೆ ಹಾಗೂ ನಮ್ಮನ್ನು ರಕ್ಷಿಸಿ, ರಕ್ಷಿಸಿ ಎಂದು ಬೊಬ್ಬೆ ಹಾಕುತ್ತಿದ್ದಾರೆ ಎಂದುಮೋದಿ ಹೇಳಿದರು.

ಮಹಾಘಟಬಂಧನದೇಶದ ಜನತೆಯ ವಿರೋಧಿಆಗಿದೆ, ಅವರು ಒಗ್ಗೂಡುವಿಕೆ ಕ್ರಮಬದ್ಧವಾಗಿಲ್ಲ, ಈಗಾಗಲೇ ಅವರು ತಮ್ಮ ಪಾಲಿಗಾಗಿ ಚೌಕಾಸಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಭ್ರಷ್ಟಾಚಾರದ ವಿರುದ್ಧದ ನನ್ನ ಕ್ರಮದಿಂದಾಗಿ ಕೆಲವರಿಗೆ ನನ್ನ ಮೇಲೆ ಅಸಮಾಧಾನ ಉಂಟಾಗಿದೆ, ಸಾರ್ವಜನಿಕರು ಹಣ ಲೂಟಿ ಮಾಡುವುದನ್ನು ನಾನು ತಡೆದಿದ್ದೇನೆ. ಇದಕ್ಕಾಗಿಯೇ ಅವರು ಮೈತ್ರಿ ಮಾಡಿಕೊಂಡು ಮಹಾಘಟಬಂಧನ ಎಂದು ಕರೆದುಕೊಂಡಿದ್ದಾರೆ ಎಂದು ಮೋದಿ ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT