ಗುಜರಾತ್‌ನಲ್ಲಿ ಆರ್‌ಎಸ್‌ಎಸ್‌ನಿಂದ ಪಟೇಲ್‌ರನ್ನು ಟೀಕಿಸಿರುವ ಪುಸ್ತಕ ಮಾರಾಟ!

7
ಎಚ್‌.ವಿ. ಶೇಷಾದ್ರಿ ಬರೆದ ಪುಸ್ತಕ

ಗುಜರಾತ್‌ನಲ್ಲಿ ಆರ್‌ಎಸ್‌ಎಸ್‌ನಿಂದ ಪಟೇಲ್‌ರನ್ನು ಟೀಕಿಸಿರುವ ಪುಸ್ತಕ ಮಾರಾಟ!

Published:
Updated:

ಅಹಮದಾಬದ್: ಸ್ವತಂತ್ರ ಭಾರತದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭಭಾಯ್‌ ಪಟೇಲ್ ಅವರನ್ನು ಟೀಕಿಸಿ ಬರೆಯಲಾಗಿರುವ ಪುಸ್ತಕವೊಂದು ಕಳೆದ 27 ವರ್ಷಗಳಿಂದ ಗುಜರಾತ್‌ನಲ್ಲಿ ಮಾರಾಟವಾಗುತ್ತಿದೆ! ಗುಜರಾತ್‌ನ ಆರ್‌ಎಸ್‌ಎಸ್‌ ಪ್ರಧಾನ ಕಚೇರಿಯಲ್ಲಿಯೇ ಪುಸ್ತಕ ಮಾರಾಟವಾಗುತ್ತಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಆರ್‌ಎಸ್‌ಎಸ್‌ ಅನ್ನು ದ್ವೇಷ ಹರಡುವ ಶಕ್ತಿ ಎಂದಿದ್ದರು ಸರ್ದಾರ್ ಪಟೇಲ್‌!

ಆರ್‌ಎಸ್‌ಎಸ್‌ ಮುಖಂಡ ಎಚ್‌.ವಿ. ಶೇಷಾದ್ರಿ ಬರೆದಿರುವ ‘ವಿಭಜನೆಯ ದುರಂತ ಕಥೆ (The Tragic Story of Partition)’ ಪುಸ್ತಕದಲ್ಲಿ ಪಟೇಲ್ ಹಾಗೂ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು, ಇಬ್ಬರನ್ನೂ ಟೀಕಿಸಲಾಗಿದೆ. ದೇಶ ವಿಭಜನೆಗೆ ಅವರಿಬ್ಬರೂ ಕಾರಣರು ಎಂದು ಬರೆಯಲಾಗಿದೆ ಎಂದು ಟೈಮ್ಸ್ ಆಫ್‌ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: ಸರ್ದಾರ್ ಪಟೇಲ್‌ ‘ಏಕತಾ ಪ್ರತಿಮೆ’ ಲೋಕಾರ್ಪಣೆ ಮಾಡಿದ ನರೇಂದ್ರ ಮೋದಿ

ದೇಶ ವಿಭಜನೆಗೆ ಸಂಬಂಧಿಸಿ ಜಸ್ವಂತ್ ಸಿಂಗ್ ಅವರು ಬರೆದಿರುವ ‘ಜಿನ್ನಾ’ ಪುಸ್ತಕವನ್ನು ಪ್ರಧಾನಿ ನರೇಂದ್ರ ಮೋದಿ 2009ರಲ್ಲಿ (ಆಗ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು) ನಿಷೇಧಿಸಿದ್ದರು. ಸರ್ದಾರ್ ಪಟೇಲ್ ಅವರನ್ನು ಅವಮಾನಿಸಲಾಗಿದೆ ಎಂದು ಮೋದಿ ಈ ನಿರ್ಧಾರ ಕೈಗೊಂಡಿದ್ದರು. ಆದರೆ, ಅಂತಹದ್ದೇ ಇನ್ನೊಂದು ಪುಸ್ತಕ ದಶಕಗಳಿಂದ ಮಾರಾಟವಾಗುತ್ತಿದ್ದರೂ ಮೋದಿಗೆ ತಿಳಿದಿಲ್ಲ ಎಂದು ಟೈಮ್ಸ್ ಆಫ್‌ ಇಂಡಿಯಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಸರ್ದಾರ್ ಪಟೇಲ್‌ ಪ್ರತಿಮೆಗಳಿಗೂ ಸರದಾರ

‘ಮೋದಿ ಅವರಿಗೆ ಈ ಪುಸ್ತಕದ ಬಗ್ಗೆ ಅರಿವಿಲ್ಲದಿರುವ ಸಾಧ್ಯತೆಯೂ ಇದೆ. 1967ರಿಂದ 1980ರ ವರೆಗೆ ಮೋದಿ ಅವರು ಆರ್‌ಎಸ್ಎಸ್ ಪ್ರಚಾರಕರಾಗಿ ಆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಎಚ್‌.ವಿ. ಶೇಷಾದ್ರಿ ಅವರ ಪುಸ್ತಕ 1982ರ ನಂತರ ಪ್ರಕಟವಾಗಿತ್ತು’ ಎಂದೂ ವರದಿಯಲ್ಲಿ ಹೇಳಲಾಗಿದೆ.

‘ಜಿನ್ನಾ, ಭಾರತ, ಸ್ವಾತಂತ್ರ್ಯ, ವಿಭಜನೆ’ ಪುಸ್ತಕದಲ್ಲಿ ಜಸ್ವಂತ್ ಸಿಂಗ್ ಮಾಡಿರುವಂತೆಯೇ ಎಚ್‌.ವಿ. ಶೇಷಾದ್ರಿ ಪುಸ್ತಕದಲ್ಲೂ ದೇಶ ವಿಭಜನೆಗೆ ಸರ್ದಾರ್ ಪಟೇಲ್, ನೆಹರು ಅವರನ್ನು ಹೊಣೆ ಮಾಡಲಾಗಿದೆ. ಈಗಲೂ ಗುಜರಾತ್‌ನ ಸಾಹಿತ್ಯ ಸಾಧನಾ ಟ್ರಸ್ಟ್‌ನಲ್ಲಿ ಶೇಷಾದ್ರಿ ಪುಸ್ತಕ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಏಕತಾ ಮೂರ್ತಿ ಮುಂದಿನ ಪೀಳಿಗೆಗೆ ಸ್ಫೂರ್ತಿ

ಈ ಮಧ್ಯೆ, ಕಾನೂನು ಸವಾಲುಗಳನ್ನು ಎದುರಿಸುವ ಸಲುವಾಗಿ ಶೇಷಾದ್ರಿ ಅವರ ಪುಸ್ತಕದ ಬಗ್ಗೆ ಸೂಕ್ಷ್ಮವಾಗಿ ಪರೀಕ್ಷಿಸುವಂತೆ ನಿಕಟವರ್ತಿಗಳಿಗೆ ಮೋದಿ ಸೂಚಿಸಿದ್ದಾರೆ ಎಂಬುದು ತಿಳಿದುಬಂದಿದೆ. ‘ಜಿನ್ನಾ’ ಪುಸ್ತಕ ನಿಷೇಧ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲು ಜಸ್ವಂತ್ ಸಿಂಗ್ ಮುಂದಾಗಿರುವುದು ಖಚಿತಪಡಿಸಲಾರದ ಮೂಲಗಳಿಂದ ತಿಳಿದುಬಂದಿದೆ. ಜಸ್ವಂತ್ ಸಿಂಗ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದೇ ಆದಲ್ಲಿ ಅವರ ವಾದಕ್ಕೆ ಶೇಷಾದ್ರಿ ಅವರ ಪುಸ್ತಕ ಬಲತುಂಬಲಿದೆ. ಬಿಜೆಪಿ ನಾಯಕ ಅರುಣ್ ಶೌರಿ ಅವರೇ ಸಿಂಗ್ ಪುಸ್ತಕ ನಿಷೇಧವನ್ನು ಹಾಸ್ಯಾಸ್ಪದ ಎಂದಿದ್ದರು ಎಂದೂ ವರದಿಯಲ್ಲಿ ಹೇಳಲಾಗಿದೆ.

ಕಳೆದ 27 ವರ್ಷಗಳಿಂದ ಶೇಷಾದ್ರಿ ಅವರ ಪುಸ್ತಕದ ಸಾವಿರಾರು ಪ್ರತಿಗಳು ಗುಜರಾತ್‌ನಲ್ಲಿ ಮಾರಾಟವಾಗುತ್ತಿವೆ. ಪ್ರತಿಯೊಬ್ಬ ಆರ್‌ಎಸ್‌ಎಸ್ ಸದಸ್ಯನೂ ಈ ಪುಸ್ತಕವನ್ನು ಹೊಂದಿರಲೇಬೇಕು ಎಂಬಂಥ ಸ್ಥಿತಿ ಇದೆ ಎಂದೂ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಸರ್ದಾರ್‌ಗೆ ಗೌರವ: ‘ಪಟೇಲಸದೃಶ’ ಬದ್ಧತೆ

‘ಶೇಷಾದ್ರಿ ಅವರ ಪುಸ್ತಕದಲ್ಲಿ ಸಂಘದ ಪ್ರಮುಖ ಸಿದ್ಧಾಂತವಾಗಿರುವ ಅಖಂಡ ಭಾರತದ ಮಹತ್ವದ ಬಗ್ಗೆ ಉಲ್ಲೇಖಸಲಾಗಿದೆ’ ಎಂದು ಗುಜರಾತ್ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಹೇಮಂತ್ ಶಾ ತಿಳಿಸಿದ್ದಾರೆ.


ಎಚ್‌.ವಿ. ಶೇಷಾದ್ರಿ ಬರೆದಿರುವ ಪುಸ್ತಕದ ಪ್ರತಿಯ ಚಿತ್ರ

ಇನ್ನಷ್ಟು...

ಪಟೇಲರ ಪ್ರತಿಮೆಯ ಎದುರು ಹಸಿದ ಮಕ್ಕಳು: ಈ ಚಿತ್ರವೇ ಸುಳ್ಳು​

ವಲ್ಲಭಬಾಯ್ 'ಏಕತಾ ಪ್ರತಿಮೆ' ಬಳಿ ಫಲಕವೇ ಇಲ್ಲ? ವೈರಲ್ ಆಗಿದ್ದು ಫೇಕ್ ಚಿತ್ರ?


ಎಚ್‌.ವಿ. ಶೇಷಾದ್ರಿ (ಹೊ.ವೆ. ಶೇಷಾದ್ರಿ)

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !