ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರು ಶರಣಾಗುವ ಬದಲು ಗನ್ ಹಿಡಿದರೆ ಗುಂಡಿಕ್ಕಿ ಸಾಯಿಸಲಾಗುವುದು: ಸೇನೆ ಎಚ್ಚರಿಕೆ

Last Updated 19 ಫೆಬ್ರುವರಿ 2019, 10:35 IST
ಅಕ್ಷರ ಗಾತ್ರ

ನವದೆಹಲಿ: ಪುಲ್ವಾಮ ಆತ್ಮಾಹುತಿ ದಾಳಿ ನಡೆದ 100 ಗಂಟೆಗಳಲ್ಲಿ ಭಾರತೀಯ ಸೇನೆ ಕಣಿವೆ ರಾಜ್ಯದಲ್ಲಿ ಜೈಷ್- ಇ- ಮೊಹಮ್ಮದ್ ಸಂಘಟನೆಯ ಉಗ್ರರನ್ನು ನಿಗ್ರಹ ಮಾಡಿದೆ.

ಫೆಬ್ರುವರಿ 14 ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ಮೇಲೆ ಆತ್ಮಾಹುತಿ ದಾಳಿ ನಡೆದ 100 ಗಂಟೆಗಳಲ್ಲಿ ಜೈಷ್-ಇ- ಮೊಹಮ್ಮದ್ ಉಗ್ರ ಸಂಘಟನೆಯ ಮೂವರು ನಾಯಕರನ್ನು ಸೇನೆಹತ್ಯೆಮಾಡಿದೆ ಎಂದು ಶ್ರೀನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲೆ.ಜನರಲ್ ಕೆ.ಎಸ್. ಜೆಧಿಲ್ಲೋನ್ ಹೇಳಿದ್ದಾರೆ.

17 ಗಂಟೆಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಮೂವರು ಉಗ್ರ ನಾಯಕರನ್ನು ಸೇನೆಹತ್ಯೆಗೈದಿದ್ದು, ಈ ಚಕಮಕಿಯಲ್ಲಿ ಓರ್ವ ಮೇಜರ್ ಮತ್ತು ಮೂವರು ಯೋಧರು ಹುತಾತ್ಮರಾಗಿದ್ದಾರೆ.ಈ ಎನ್‍ಕೌಂಟರ್‌ನಲ್ಲಿ ಕಾಶ್ಮೀರ ಪೊಲೀಸ್ ಸಿಬ್ಬಂದಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

40 ಸಿಆರ್‌ಪಿಎಫ್ ಯೋಧರನ್ನುಬಲಿ ಪಡೆದ ಪುಲ್ವಾಮ ಆತ್ಮಾಹುತಿ ದಾಳಿ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ ಕೈವಾಡವಿದೆ.ನಾವು ಜೈಷ್- ಇ- ಮೊಹಮ್ಮ ದ್ ಸಂಘಟನೆಯ ನಾಯಕರನ್ನು ಹುಡುಕುತ್ತಿದ್ದೇವೆ.ಕಣಿವೆ ರಾಜ್ಯದಲ್ಲಿ ಜೈಷೆ ಸಂಘಟನೆಯನ್ನು ನಾಲು ಮಟ್ಟಹಾಕಿದ್ದೇವೆ. ಅದೂ ಪುಲ್ವಾಮ ದಾಳಿ ನಡೆದ 100 ಗಂಟೆಗಳ ಅವಧಿಯಲ್ಲಿ ಎಂದು ಧಿಲ್ಲೋನ್ ಹೇಳಿದ್ದಾರೆ.

ಜೈಷೆ ಸಂಘಟನೆಯ ಟಾಪ್ ಕಮಾಂಡರ್, ಪಾಕ್ ಮೂಲದ ಕಮ್ರಾನ್ಸೋಮವಾರ ನಡೆದ ಎನ್‍ಕೌಂಟರ್‍ನಲ್ಲಿ ಹತ್ಯೆಯಾಗಿದ್ದವು. ಈತ ಜೈಷೆ ಸಂಘಟನೆಯ ಪಾಕ್ ಮುಖ್ಯಸ್ಥ ಮಸೂಜ್ ಅಜರ್‌ನ ನಿಕಟವರ್ತಿಯಾಗಿದ್ದಾನೆ.ಆತ್ಮಾಹುತಿ ಬಾಂಬರ್ ಅದಿಲ್ ಅಹ್ಮದ್ ಧಾರ್ ಕೈಯಲ್ಲಿ ಪುಲ್ವಾಮದಲ್ಲಿ ಬಾಂಬ್ ಸ್ಫೋಟ ಮಾಡಿಸಿದ್ದು ಈತನೇ ಎಂದು ಶಂಕಿಸಲಾಗಿದೆ.

ಸ್ಥಳೀಯ ಕಾಶ್ಮೀರಿ ಬಾಂಬ್ ಸ್ಪೆಷಲಿಸ್ಟ್ ಹಿಲಾಲ್ ಅಹ್ಮದ್ ಮತ್ತು ಪಾಕ್ ಮೂಲದ ರಷೀದ್ ಈ ಎನ್‍ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾರೆ.

ಉಗ್ರರಿಗೆ ಎಚ್ಚರಿಕೆ
ಕಾಶ್ಮೀರದ ಸಾಮಾಜಿಕ ಬದುಕಿನಲ್ಲಿ ತಾಯಂದಿರ ಪಾತ್ರ ದೊಡ್ಡದು. ನಿಮ್ಮ ಮಕ್ಕಳು ಬಂದೂಕು ಹಿಡಿಯದಂತೆ ಎಚ್ಚರವಹಿಸಿ. ಒಂದುವೇಳೆ ಈಗಾಗಲೇ ಬಂದೂಕು ಹಿಡಿದಿದ್ದರೆ ತಕ್ಷಣ ಶರಣಾಗುವಂತೆ ಮನವೊಲಿಸಬೇಕು ಎಂದು ಎಲ್ಲ ತಾಯಂದಿರಲ್ಲಿ ಮನವಿ ಮಾಡುತ್ತೇನೆ. ಬಂದೂಕು ಹಿಡಿದವರು ಯಾರೇ ಆಗಿದ್ದರೂ ಹೊಸಕಿಹಾಕುತ್ತೇವೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT